ಕಣ್ಣೂರು: ವಿಸ್ಮಯ ಅಮ್ಯೂಸ್ಮೆಂಟ್ ಪಾರ್ಕ್ 19ನೇ ವರ್ಷಕ್ಕೆ ಕಾಲಿಟ್ಟಿದ್ದು, ಜನರಿಗೆ ಇನ್ನಷ್ಟು ಹೆಚ್ಚು ಸೌಕರ್ಯಪ್ರದಗೊಳಿಸುವುದರಂಗವಾಗಿ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆಗೆ ಪ್ರಾಮುಖ್ಯತೆ ನೀಡಲು ಆಧುನಿಕ ವ್ಯವಸ್ಥೆಗಳೊಂದಿಗೆ ನಿರ್ಮಿಸಿದ ಮಲಿನ ಜಲ ಸಂಸ್ಕರಣೆ ಪ್ಲಾಂಟನ್ನು ವಿಪಕ್ಷ ಮುಖಂಡ ಪಿಣರಾಯಿ ವಿಜಯನ್ ಉದ್ಘಾಟಿಸಿದರು. ವಿಸ್ಮಯ ಅಮ್ಯುಸ್ಮೆಂಟ್ ಪಾರ್ಕ್ ಅಧ್ಯಕ್ಷ ಪಿ.ವಿ. ಗೋಪಿನಾಥ್ ಅಧ್ಯಕ್ಷತೆ ವಹಿಸಿದರು. ಪ್ರತಿ ವರ್ಷ ೫ ಲಕ್ಷದಷ್ಟು ಸಂದರ್ಶಕರು ತಲುಪುವ ವಿಸ್ಮಯ ಪಾರ್ಕ್ನ ತ್ಯಾಜ್ಯ ಸಂಸ್ಕರಣೆ ವ್ಯವಸ್ಥೆಗಳಿಗೆ ೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಹೊಸ ಪ್ಲಾಂಟ್ನಲ್ಲಿ ಆಧುನಿಕ ಯಂತ್ರಗಳು, ನೂತನ ತಾಂತ್ರಿಕ ವಿದ್ಯೆಯನ್ನು ಅಳವಡಿಸಲಾಗಿದೆ. ತೃಶೂರು ಸರಕಾರಿ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ಇಲಾಖೆ ನಿವೃತ್ತ ಅಧಿಕಾರಿ ಡಾ. ಆರ್. ಜಯಚಂದ್ರ ಈ ಪ್ಲಾಂಟ್ಗೆ ರೂಪು ನೀಡಿದ್ದಾರೆ. ಪ್ರತಿದಿನ ನಾಲ್ಕು ಲಕ್ಷ ಲೀಟರ್ ಮಲಿನ ಜಲವನ್ನು ಸಂಸ್ಕರಿಸಲು ಸಾಮರ್ಥ್ಯ ಇರುವ ಪ್ಲಾಂಟ್ ರಾಜ್ಯದಲ್ಲಿ ಈಗಿರುವ ಗರಿಷ್ಠ ಸಾಮರ್ಥ್ಯದ ಮಲಿನಜಲ ಸಂಸ್ಕರಣೆ ವ್ಯವಸ್ಥೆಗಳಲ್ಲಿ ಒಂದಾಗಿದೆ. ಪಾರ್ಕ್ನಲ್ಲಿ ಸೋಲಾರ್ ಪ್ಲಾಂಟ್, ಮಳೆನೀರು ಸಂಗ್ರಹ, ಪರಿಸರ ಸೌಹಾರ್ದವಾಗಿ ಮಾದರಿಯಾಗಿ ಮುಂದುವರಿಯುತ್ತಿದೆ. ಪಾರ್ಕ್ನ ಉಪಾಧ್ಯಕ್ಷ ಕೆ. ಸಂತೋಷ್ ಸ್ವಾಗತಿಸಿ, ನಿರ್ದೇಶಕ ಎ. ದಾಮೋದರನ್ ವಂದಿಸಿದರು. ಕೆ.ಕೆ. ರಾಜೇಶ್, ವಿ. ಸತೀದೇವಿ, ಪಿ. ದೀಪ, ಸುನಿಲ್ ಕುಮಾರ್, ಪಿ.ಪಿ. ಗಂಗಾಧರನ್, ಪಿ.ಕೆ. ಶ್ಯಾಮಲ ಟೀಚರ್, ಟಿ.ವಿ. ನಾರಾಯಣನ್, ವಲ್ಸನ್ ಕಡಂಬೇರಿ, ಸಮದ್ ಕಡಂಬೇರಿ, ಕೆ. ಗಣೇಶನ್, ಪಿ. ಮುಕುಂದನ್ ಶುಭ ಕೋರಿದರು




