ಕುಂಬಳೆ: ಕಾಸರಗೋಡು-ಮಂಗಳೂರು ರೂಟ್ನಲ್ಲಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ಗಳ ನೌಕರರಿಗೆ ಈಗಲೂ ಪ್ರಜ್ಞೆ ಉಂಟಾಗಿಲ್ಲವೆಂದೂ ಸಮಾಜ ಸೇವಕ ಮೂಸ ಅಡ್ಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಯಾಣಿಕರೊಂದಿಗೆ ಯುದ್ಧ ಘೋಷಣೆ ನಡೆಸುವ ಈ ರೀತಿಯ ನೌಕರರಿಗೆ ಮೂಗುದಾರ ಹಾಕಬೇಕಾಗಿದೆಯೆಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.
ಕಳೆದ ಶನಿವಾರ ಸಂಜೆ ಗೆಳೆಯರ ಜೊತೆ ಕುಂಬಳೆಯಿಂದ ಮಂಗಳೂರಿಗೆ ಹೋಗಲು ಎ. ೦೯೮೬ ಬಸ್ಗೆ ಹತ್ತಲು ಯತ್ನಿಸುತ್ತಿದ್ದ ಮಧ್ಯೆ ಬಾಗಿಲನ್ನು ಮುಚ್ಚಲಾಯಿತು. ಇದರಿಂದ ಕೈಗೆ ಗಾಯ ಉಂಟಾಯಿತು. ಅದರ ಮುಂಚಿತ ಕೈಗೂಸು ಸಹಿತ ಬಸ್ಗೆ ಯುವತಿ ಹತ್ತುತ್ತಿದ್ದಂತೆ ಬಸ್ನ್ನು ಮುಂದೆ ಚಲಾಯಿಸಿದ್ದು ಆದರೆ ಅದೃಷ್ಟದಿಂದ ದುರಂತ ಸಂಭವಿಸಿಲ್ಲ.
ಇದೇ ಬಸ್ ಬಂದ್ಯೋಡಿನಲ್ಲಿ ನಿಲ್ಲಿಸಿದಾಗ ಓರ್ವೆ ಮಹಿಳೆ ಬಸ್ ಇಳಿಯುವಾಗ ಬಸ್ನ್ನು ಮುಂದಕ್ಕೆ ಚಲಾಯಿಸಲಾಗಿದೆ. ಇಲ್ಲೂ ಅದೃಷ್ಟ ಕೈಬಿಡಲಿಲ್ಲ. ಅಲ್ಲದಿದ್ದರೆ ದೊಡ್ಡ ದುರಂತ ಉಂಟಾಗಬಹುದಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ನೌಕರರು ಅವಾಚ್ಯವಾಗಿ ಬೈದರೆಂದು ದೂರಿನಲ್ಲಿ ವಿವರಿಸಲಾಗಿದೆ. ಕೆಎಸ್ಆರ್ಟಿಸಿಯ ಈ ರೀತಿಯ ಕ್ರಮಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ದೂರಿನಲ್ಲಿ ಆಗ್ರಹಿಸಿದ್ದಾರೆ.





