ಬದಿಯಡ್ಕ: ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಸಂಘಟನಾ ಸಮಿತಿ ರಚನಾ ಸಭೆ ನಿನ್ನೆ ಬದಿಯಡ್ಕ ನವಜೀವನ ಹೈಯರ್ ಸೆಕೆಂಡರಿ ಸಭಾಂಗಣದಲ್ಲಿ ನಡೆಯಿತು. ಬ್ಲೋಕ್ ಪಂ. ಅಧ್ಯಕ್ಷ ಅಬ್ದುಲ್ಲ ಕುಂಞಿ ಚೆರ್ಕಳ ಉದ್ಘಾಟಿಸಿ ಮಾತನಾಡಿ ಶಾಲಾ ಕಲೋತ್ಸವಗಳು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಅನಾವರಣಗೊಳಿಸಲು ಅತ್ಯುತ್ತಮ ವೇದಿಕೆಯಾಗಿದೆ. ಕಲೆ ಮತ್ತು ಸಾಹಿತ್ಯವು ವಿದ್ಯಾರ್ಥಿಗಳ ಸರ್ವತೋ ಮುಖ ಬೆಳವಣಿಗೆಗೆ ಪೂರಕವಾಗಿದ್ದು, ಈ ಬಾರಿಯ ಉಪಜಿಲ್ಲಾ ಕಲೋತ್ಸವವನ್ನು ಯಶಸ್ವಿಯಾಗಿ ನಡೆಸಲು ಜನಪ್ರತಿನಿಧಿ ಗಳು, ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಕರೆ ಮಾಡಿದರು. ಬದಿಯಡ್ಕ ಪಂ. ಅಧ್ಯಕ್ಷ ಡಿ.ಶಂಕರ ಅಧ್ಯಕ್ಷೆ ವಹಿಸಿ ಮಾತನಾಡಿ ಉಪಜಿಲ್ಲಾ ಶಾಲಾ ಕಲೋತ್ಸವವನ್ನು ಯಾವುದೇ ಕೊರತೆಯಿಲ್ಲದೆ ನಾಡಿನ ಜನತೆಯ ಸಹಕಾರದೊಂದಿಗೆ ಶಿಸ್ತುಬದ್ಧವಾಗಿ ಹಾಗೂ ಅಭೂತಪೂರ್ವ ರೀತಿಯಲ್ಲಿ ನಡೆಸಿ ಯಶಸ್ವಿಗೊಳಿಸಲಾಗು ವುದು. ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ ಮತ್ತು ಸೌಕರ್ಯ ಕಲ್ಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಚೆಂಗಳ ಪಂ. ಅಧ್ಯಕ್ಷ ವಸಂತ ಅಜಕ್ಕೋಡು, ಎಣ್ಮಕಜೆ ಪಂ. ಅಧ್ಯಕ್ಷೆ ಕುಸುಮಾವತಿ, ಬದಿಯಡ್ಕ ಪಂ. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ಬ್ಲೋಕ್ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಎ.ಎಸ್.ಮೊಯ್ದು, ಬದಿಯಡ್ಕ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಅವಿನಾಶ್ ರೈ, ಹಮೀದ್ ಕೆಡೆಂಜಿ, ಜಿಲ್ಲಾ ಪಂ. ಸದಸ್ಯ ರಾಮಪ್ಪ ಮಂಜೇಶ್ವರ, ಬದಿಯಡ್ಕ ಪಂ. ಸದಸ್ಯರಾದ ಗಂಗಾಧರ ಗೋಳಿಯಡ್ಕ,ಶ್ಯಾಮ್ ಪ್ರಸಾದ್ ಮಾನ್ಯ, ಮಧುಸೂದನ ಕಂಗಿಲ, ಶ್ಯಾಮ್ ಪ್ರಸಾದ್ ಸರಳಿ, ಉಪಜಿಲ್ಲಾ ವಿದ್ಯಾಧಿ ಕಾರಿ ಅಶೋಕ್, ಅಧ್ಯಾಪಕ ಪ್ರಭಾಕರನ್ ನಾಯರ್, ಪ್ರಾಂಶುಪಾಲ ಶ್ರೀಕೃಷ್ಣ, ಪ್ರಮುಖರಾದ ಈಶ್ವರ ಭಟ್ ಪೆರ್ಮುಖ, ಉದನೇಶ್ವರ ಬದಿಯಡ್ಕ, ಸುಧಾಕರ ವಿದ್ಯಾಗಿರಿ, ಅನ್ವರ್ ಓಜೋನ್, ಶ್ರೀಕಾಂತ್, ಆನಂದ ಕೆ. ಮವ್ವಾರು ಉಪಸ್ಥಿತರಿ ದ್ದರು. ಅಧ್ಯಾಪಕ ನಿರಂಜನ ರೈ ಸಂಘಟನಾ ಸಮಿತಿಯ ಪದಾಧಿಕಾರಿಗಳನ್ನು ಘೋಷಿಸಿದರು. ಅಧ್ಯಾಪಕರಾದ ಪ್ರಸಾದ್, ರಾಜೇಶ್ ಅಗಲ್ಪಾಡಿ, ನಾರಾಯಣ ಆಸ್ರ, ಸಿಂಧು ನಿರೂಪಿಸಿದರು. ಮುಖ್ಯೋ ಪಾಧ್ಯಾಯಿನಿ ಶಾಹಿದಾ ಬೀವಿ ಸ್ವಾಗತಿಸಿ, ಉಪಮುಖ್ಯೋಪಾಧ್ಯಾ ಯ ಉಣ್ಣಿಕೃಷ್ಣನ್ ವಂದಿಸಿದರು. ಉಪಜಿಲ್ಲಾ ಕಲೋತ್ಸವದ ವೇದಿಕೇ ತರ ಸ್ಪರ್ಧೆಗಳು ಅಕ್ಟೋಬರ್ ೨೬, ೨೭ರಂದು, ವೇದಿಕೆ ಸ್ಪರ್ಧೆಗಳು ನವಂ ಬರ್ ೨,೩,೪ರಂದು ನಡೆಯಲಿದೆ. ಒಟ್ಟು ೧೨ ವೇದಿಕೆಗಳನ್ನು ನಿರ್ಮಿಸಲಾಗುವುದು.





