ತಾಲೂಕು ರಚನೆಯಾಗಿ 11 ವರ್ಷ: ಸ್ವಂತ ಕಚೇರಿ ಕಟ್ಟಡಕ್ಕಾಗಿ ಗೋಗರೆಯುತ್ತಿರುವ ಮಂಜೇಶ್ವರ ತಾಲೂಕು

ಉಪ್ಪಳ: ಮಂಜೇಶ್ವರ ತಾಲೂಕು ಕಚೇರಿಗೆ ಸ್ವಂತ ಕಟ್ಟಡ ಇಲ್ಲದೆ ಬಾಡಿಗೆ ಕಟ್ಟಡದಲ್ಲೇ ಈಗಲೂ ಕಾರ್ಯಾಚರಿ ಸುತ್ತಿರುವುದು ಜನರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಮಂಜೇಶ್ವರ ತಾಲೂಕು ರಚನೆಯಾಗಿ ಹಲವಾರು ವರ್ಷಗಳು ಸಂದರೂ ಈಗಲೂ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯಚರಿಸುತ್ತಿದೆ. ಉಪ್ಪಳ ಬಸ್ ನಿಲ್ದಾಣ ಮುಂಭಾಗದ ಬಹು ಮಹಡಿ ಕಟ್ಟಡದ ಎರಡನೇ ಅಂತಸ್ತಿನಲ್ಲಿ ತಾಲೂಕು ಕಚೇರಿ ಕಾರ್ಯಾಚರಿಸುತ್ತಿದ್ದು, ಸೌಕರ್ಯಗಳ ಕೊರತೆ ಸಮಸ್ಯೆಯಾಗಿದೆ. ತಾಲೂಕು ರಚನೆಯಾಗಿ ಸುಮಾರು 11 ವರ್ಷಗಳಾದರೂ ಇನ್ನೂ ಸ್ವಂತ ಕಟ್ಟಡ ನಿರ್ಮಿಸದಿರುವುದಕ್ಕೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ÷್ಯ ಕಾರಣವೆನ್ನಲಾಗಿದೆ. ತಾಲೂಕು ಕಚೇರಿಗೆ ತಲುಪಬೇಕಾದರೆ ೪೦ರಷ್ಟು ಮೆಟ್ಟಿಲುಗಳನ್ನು ಏರಬೇಕಾಗಿದೆ. ಇದರಿಂದ ಹಿರಿಯ ನಾಗರಿಕರು, ಮಹಿಳೆಯರು, ವೃದ್ದರು, ರೋಗಿಗಳಿಗೆ ಇಲ್ಲಿಗೆ ಬರಲು ಹರ ಸಾಹಸಪಡಬೇಕಾಗಿದೆ. ಇನ್ನಾದರೂ ಮಂಜೇಶ್ವರ ತಾಲೂಕು ಕಚೇರಿಗೆ ಎಲ್ಲಾ ಸೌಕರ್ಯ ಗಳನ್ನೊಳಗೊಂಡ ಸ್ವಂತ ಕಟ್ಟಡ ಆದಷ್ಟು ಬೇಗನೆ ನಿರ್ಮಾಣ ಗೊಳಿಸುವಲ್ಲಿ ಶಾಸಕರು, ಅಧಿಕಾರಿಗಳು ಮುತುವರ್ಜಿ ವಹಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page