ಹೊಳೆಯಲ್ಲಿ ನೀರುಪಾಲಾದ ಯುವಕನ ಮೃತದೇಹ ಪತ್ತೆ

ಬಂದಡ್ಕ: ಕುಂಡಂಕುಳಿ ಪಾಂಡಿ ಕಂಡ ಮೂಲಕ   ಪಯಸ್ವಿನಿ   ಹೊಳೆಯಲ್ಲಿ ಸ್ನಾನಕ್ಕಿಳಿದ ವೇಳೆ ನಾಪತ್ತೆಯಾಗಿದ್ದ ಮುನ್ನಾಡ್ ಮನ್ನಡ್ಕ ನಿವಾಸಿ ಮಾಧವನ್‌ರ ಪುತ್ರ ಅರ್ಜುನನ್ (26)ರ ಮೃತದೇಹ ನಿನ್ನೆ ರಾತ್ರಿ  ಅಲ್ಲೇ ಸಮೀಪ 100 ಮೀಟರ್ ದೂರದಲ್ಲಿ ಪತ್ತೆಯಾಗಿದೆ.  ವಿಷಯ ತಿಳಿದು ಆದೂರು ಪೊಲೀಸರು ಸ್ಥಳಕ್ಕೆ ತಲುಪಿ ಊರವರ ಸಹಾಯದಿಂದ ಮೃತದೇಹವನ್ನು ಮೇಲಕ್ಕೆತ್ತಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಯಿತು. ಅರ್ಜುನನ್ ಮೊನ್ನೆ ಮಧ್ಯಾಹ್ನ ಸ್ನೇಹಿತರ ಜೊತೆಗೆ ಹೊಳೆಯಲ್ಲಿ ಸ್ನಾನಕ್ಕಿಳಿದಿದ್ದರು. ಈ ವೇಳೆ ಅವರು ನೀರಿನಲ್ಲಿ ಮುಳುಗಿ ನಾಪತ್ತೆಯಾ ಗಿದ್ದರು.  ಕುತ್ತಿಕ್ಕೋಲು ಅಗ್ನಿಶಾಮ ಕದಳ ಸ್ಕೂಬಾ ಸಹಾಯದಿಂದ ವ್ಯಾಪಕ ಶೋಧ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಆದೂರು ಪೊಲೀಸರು ಕೂಡಾ ನಾಗರಿಕರ ಸಹಾಯದೊಂದಿಗೆ ಶೋಧ ನಡೆಸಿದ್ದರು. ಶೋಧ ಮುಂದುವರಿಯುತ್ತಿದ್ದಂತೆ ನಿನ್ನೆ ರಾತ್ರಿ ಮೃತದೇಹ ಪತ್ತೆಯಾಗಿದೆ. ಮೃತರು ತಂದೆ, ತಾಯಿ ಬಾಲಾಮಣಿ (ಪ್ರಿಯ), ಸಹೋದರಿ ಅನಶ್ವರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page