ಓಂ ಪ್ರಕಾಶ್ ಮಾಥೂರ್ ಕೇರಳದ ನೂತನ ರಾಜ್ಯಪಾಲ ಅರ್ಲೇಖರ್ ತಮಿಳುನಾಡಿಗೆ

ತಿರುವನಂತಪುರ: ಕೇರಳದ ನೂತನ ರಾಜ್ಯಪಾಲರನ್ನಾಗಿ ಓಂ ಪ್ರಕಾಶ್ ಮಾಥೂರ್‌ರನ್ನು ನೇಮಿಸಲಾಗಿದೆ. ಅವರು ಸದ್ಯ ಸಿಕ್ಕಿಂ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲಿಂದ ಈಗ ಅವರನ್ನು ಕೇರಳ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ಇದೇ ಸಂದರ್ಭದಲ್ಲಿ ಕೇರಳದ ಹಾಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಖರ್‌ರನ್ನು ತಮಿಳುನಾಡು ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ನೂತನ ರಾಜ್ಯ ಪಾಲ ರಾಗಿ ನೇಮಕಗೊಂಡ ಓಂಪ್ರಕಾಶ್ ಮಾಥೂರ್ ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರ ಕರಾಗಿದ್ದರು. ಬಿಜೆಪಿಯ ಹಿರಿಯ ನೇತಾರನೂ ಆಗಿರುವ ಅವರು ಈ ಹಿಂದೆ ರಾಜ್ಯಸಭಾ ಸದಸ್ಯನಾ ಗಿಯೂ ಸೇವೆ ಸಲ್ಲಿಸಿದ್ದರು. 2008-09ರಲ್ಲಿ ಅವರು ಬಿಜೆಪಿ ರಾಜಸ್ಥಾನ  ಘಟಕದ ಅಧ್ಯಕ್ಷರಾಗಿದ್ದರು.

ಅವರನ್ನು 2024 ಜುಲೈ 31ರಿಂದ ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು. ಅಲ್ಲಿಂದ ಈಗ ಕೇರಳ ರಾಜ್ಯಪಾಲರನ್ನಾಗಿ ನೇಮಿಸ ಲಾಗಿದೆ. ಇದರಿಂದ ತೆರವುಗೊಂಡ ಸಿಕ್ಕಿಂ ರಾಜ್ಯಪಾಲರ ಸ್ಥಾನಕ್ಕೆ ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯನಾಗಿರುವ ದುಶ್ಯಂತ್ ಗೌತಮ್‌ರನ್ನು ನೇಮಿಸಲಾಗಿದೆ.

ಇದೇ ವೇಳೆ ಹರಿಯಾಣದ ಮಾಜಿ ಬಿಜೆಪಿ ಸಂಸದೆ ಡಾ. ಪಿ. ಸುಧಾ ಯಾದವ್‌ರನ್ನು ಕರ್ನಾಟಕ ದ ರಾಜ್ಯಪಾಲರನ್ನಾಗಿ ನೇಮಿಸಲಾ ಗಿದೆ. ಆ ಮೂಲಕ ಅವರು ಕರ್ನಾ ಟಕಲ್ಲಿ ನೇಮಿಸಲ್ಪಟ್ಟ ಮೊದಲ ಮಹಿಳಾ ರಾಜ್ಯಪಾಲೆ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

RELATED NEWS

You cannot copy contents of this page