ಸ್ಕೂಟರ್‌ಗೆ ಕಾರು ಢಿಕ್ಕಿ: ಚಿಕಿತ್ಸೆಯಲ್ಲಿದ್ದ ಮದ್ರಸ ಅಧ್ಯಾಪಕ ಮೃತ್ಯು

ಕಾಸರಗೋಡು: ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ  ಮದ್ರಸಾ ಅಧ್ಯಾಪಕ ಮೃತಪಟ್ಟರು. ವಿದ್ಯಾನಗರ ಚಾಲ ನಿವಾಸಿ ಸಫ್ವಾನ್ ಹುದವಿ (24) ಮೃತಪಟ್ಟ ದುರ್ದೈವಿ. ಮಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ. ಕಾಸರಗೋಡು-ಕಾಞಂಗಾಡ್ ಕೆಎಸ್‌ಟಿಪಿ ರಸ್ತೆಯ ಅಧಿಞ್ಞಾಲ್ ಎಂಬಲ್ಲಿ ಅಕ್ಟೋಬರ್ ೧೧ರಂದು ಅಪಘಾತ ಸಂಭವಿಸಿತ್ತು. ಸಫ್ವಾನ್ ಹುದವಿ ಸ್ಕೂಟರ್‌ನಲ್ಲಿ ಬಲ್ಲ ಕಡಪ್ಪುರಕ್ಕೆ  ತೆರಳುತ್ತಿದ್ದಾಗ  ಎದುರುಭಾಗದಿಂದ ಬಂದ ಕಾರು ಢಿಕ್ಕಿ ಹೊಡೆದಿತ್ತು.  ಸಫ್ವಾನ್ ಬಲ್ಲ ಕಡಪ್ಪುರ ಮಸೀದಿಯ ಉಸ್ತಾದ್ ಆಗಿದ್ದರು.

ಚಾಲ ಮಸೀದಿ ಸಮೀಪದ ಸಿ.ಎ.ಇಬ್ರಾಹಿಂ-ಖದೀಜ ದಂಪತಿಯ ಪುತ್ರನಾದ ಮೃತರು ಸಹೋದರ-ಸಹೋದರಿಯರಾದ ಕಬೀರ್, ಶಫೀಕ್, ಸಫೀರ್, ಸಿನಾನ್ ಹುದವಿ, ಸುಮಯ್ಯ, ರೈಹಾನ, ಸುನೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page