ಬೀಗ ಜಡಿದ ಕೊಠಡಿಯೊಳಗೆ ಯುವಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ: ಕೊಲೆ  ಶಂಕೆ; ಇಬ್ಬರು ನಾಪತ್ತೆ

ಕಾಸರಗೋಡು: ತಳಂಗರೆಯಲ್ಲಿ ಬೀಗ ಜಡಿದ ಕೊಠಡಿಯಲ್ಲಿ  ಯುವಕನೋರ್ವ ಶಂಕಾಸ್ಪದ ರೀತಿಯಲ್ಲಿ  ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಇದು ಕೊಲೆ  ಕೃತ್ಯವಾಗಿರಬಹುದೆಂಬ ಶಂಕೆ   ವ್ಯಕ್ತಪಡಿಸಿದ್ದಾರೆ.

ತಳಂಗರೆ ಕಡವತ್ತ್‌ನ ಸತ್ತಾರ್ ಎಂಬವರ ಮಾಲಕತ್ವದಲ್ಲಿರುವ ಅಂಗಡಿಯ ಮೇಲಿನ ಅಂತಸ್ತಿನ ಕೊಠಡಿಯಲ್ಲಿ ನಿನ್ನೆ ಸಂಜೆ 4.30ರ ವೇಳೆ   ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯ  ಗುರುತುಹಚ್ಚಲು   ಸಾಧ್ಯವಾಗಿಲ್ಲವೆಂದೂ ಪೊಲೀಸರು ತಿಳಿಸಿದ್ದಾರೆ. ಮೃತದೇಹ ಜೀರ್ಣಿಸಿ ಹುಳುಗಳು ಸೃಷ್ಟಿಯಾಗಿದ್ದು, ಭಾರೀ ದುರ್ನಾತ ಬೀರುತ್ತಿತ್ತು.

ಈ ಬಗ್ಗೆ ಕಟ್ಟಡದ ಮೇಲ್ವಿಚಾರಕ  ತಳಂಗರೆಯ ಮೊಹಮ್ಮದ್ ಶಫೀಕ್ ಪಿ.ಕೆ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪೊಲೀಸರು ಇಂದು ಬೆಳಿಗ್ಗೆ  ಮಹಜರು ನಡೆಸಿದ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ ಸಾಗಿಸಿದರು. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಸಾವಿನ ಕಾರಣ ತಿಳಿಯಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮೃತನ ಜೊತೆಗೆ ವಾಸಿಸುತ್ತಿದ್ದ ಇಬ್ಬರು ನಾಪತ್ತೆಯಾಗಿದ್ದು ಅವರ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ಆರಂಭಿಸಿದ್ದಾರೆ. ಅವರು  ಪತ್ತೆಯಾ ದಲ್ಲಿ ಈ ಸಾವಿನ ನಿಗೂಢತೆಯನ್ನು ಬೇಧಿಸಲು  ಸಾಧ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿ ಮೂಲತಃ ಕರ್ನಾ ಟಕ ನಿವಾಸಿಯಾಗಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿ ದ್ದಾರೆ. ಆತ ಸೇರಿದಂತೆ ಮೂವರು ಆ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಇತರ ಇಬ್ಬರು  ನಾಪತ್ತೆಯಾಗಿರು ದಾಗಿ ಪೊಲೀಸರು ನಡೆಸಿದ ಪ್ರಾಥ ಮಿಕ ತನಿಖೆಯಲ್ಲಿ ಸ್ಪಷ್ಟಗೊಂಡಿದೆ.

RELATED NEWS

You cannot copy contents of this page