ಬಾಯಾರುಪದವು- ಚಿಪ್ಪಾರು  ರಸ್ತೆ ದುರಸ್ತಿಗೊಳಿಸಲು ಒತ್ತಾಯ

ಬಾಯಾರು: ಪೈವಳಿಕೆ ಪಂಚಾಯತ್‌ನ ಬಾಯಾರುಪದವು -ಚಿಪ್ಪಾರು ರಸ್ತೆ ಹದಗೆಟ್ಟು ಸಂಚಾರಕ್ಕೆ ಸಮಸ್ಯೆ ಉಂಟಾಗಿದ್ದು, ಕೂಡಲೇ ರಸ್ತೆಯನ್ನು ದುರಸ್ತಿಗೊಳಿಸಲು ನಾಗರಿಕರು ಒತ್ತಾಯಿಸಿದ್ದಾರೆ. ಈ ರಸ್ತೆ ಮೂಲಕ ಚಿಪ್ಪಾರು, ಅಮ್ಮೇರಿ, ಕುರುಡಪದವು ಪ್ರದೇಶಗಳಿಗೆ ಹತ್ತಿರದ ದಾರಿಯಾಗಿದೆ. ಹಲವಾರು ಆರಾದsನಾಲಯಗಳು, ನೂರಾರು ಮನೆಗಳು ಹೊಂದಿರುವ ಪ್ರದೇಶ ಇದಾಗಿದ್ದು, ದಿನನಿತ್ಯ ನೂರಾರು ವಾಹನಗಳು ಸಂಚಾರ ನಡೆಸುತ್ತಿವೆ. ಈ ರಸ್ತೆಯ ಅಲ್ಲಲ್ಲಿ ಜಲ್ಲಿಕಲ್ಲು ಎದ್ದು ಹೊಂಡಗಳು ಸೃಷ್ಟಿಯಾಗಿದೆ. ದ್ವಿಚಕ್ರ, ತ್ರಿಚಕ್ರ ವಾಹನಗಳು ಸಂಚಾರದ ವೇಳೆ ಹೊಂಡಕ್ಕೆ ಬಿದ್ದು ವಾಹನಗಳ ಬಿಡಿಭಾಗ ಹಾನಿಗೊಳ್ಳುತ್ತಿರುವುದಾಗಿ ದೂರಲಾಗಿದೆ. ಅಲ್ಲದೆ ಲಾಲ್ಭಾಗ್- ಕುರುಡಪದವು ರಸ್ತೆಯಲ್ಲಿ ಸಂಚಾರಕ್ಕೆ ಸಮಸ್ಯೆ ಇದ್ದಲ್ಲಿ ಈ ರಸ್ತೆ ಆಶ್ರಯವಾಗಿದೆ. ಸಂಬAಧಪಟ್ಟ ಅಧಿಕಾರಿಗಳು ಈ ರಸ್ತೆಯ ದುರಸ್ತಿಗೆ ಕ್ರಮಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

You cannot copy contents of this page