ಹುಲಿವೇಷ ಸ್ಪರ್ಧೆಗಳಲ್ಲಿ ಉಪ್ಪಳ  ಹನುಮಾನ್ ಟೈಗರ್ಸ್ ಸಾಧನೆ

ಉಪ್ಪಳ: ಗಡಿನಾಡು ಉಪ್ಪಳದ ಹುಲಿವೇಷ ತಂಡವಾದ ಹನುಮಾನ್ ಟೈಗರ್ಸ್ ಉಪ್ಪಳ ತನ್ನ ಅದ್ಭುತ ಪ್ರದರ್ಶನ, ತಂಡದ ಒಗ್ಗಟ್ಟು ಹಾಗೂ ಪರಿಶ್ರಮದ ಮೂಲಕ ಹುಲಿವೇಷ ಸ್ಪರ್ಧೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ಉಪ್ಪಳದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ‘ಪುತ್ತೂರ್ದ ಪಿಲಿಗೊಬ್ಬು ಸೀಸನ್೪’ ಹುಲಿವೇಷ ಸ್ಪರ್ಧೆಯಲ್ಲಿ ಹನುಮಾನ್ ಟೈಗರ್ಸ್ ಉಪ್ಪಳ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಅದೇ ರೀತಿ ‘ಮಂಜೇಶ್ವರ ಪಿಲಿಗೊಬ್ಬು ಸೀಸನ್೩’ ಹುಲಿವೇಷ ಸ್ಪರ್ಧೆಯಲ್ಲಿಯೂ ತಂಡ ಅದ್ಭುತ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಉಚ್ಚಿಲ ಪಿಲಿ ಪಂತದಲ್ಲಿಯೂ ಹನುಮಾನ್ ಟೈಗರ್ಸ್ ಉಪ್ಪಳ ತನ್ನ ಅತ್ಯುತ್ತಮ ಪ್ರದರ್ಶನದ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿತು. ಇದರ ಜೊತೆಗೆ ಮಂಗಳೂರಿನ ಪಿಲಿ ಪರ್ಬದಲ್ಲಿ ‘ಧರಣಿ ಮಂಡಲ’ ವಿಭಾಗದಲ್ಲಿಯೂ ವಿಜೇತರಾಗಿ ಮತ್ತೊಂದು ಮಹತ್ವದ ಗೆಲುವನ್ನು ತನ್ನದಾಗಿಸಿಕೊಂಡಿದೆ. ಗಡಿನಾಡು ಉಪ್ಪಳದಿಂದ ಹೊರಹೊಮ್ಮಿದ ಹನುಮಾನ್ ಟೈಗರ್ಸ್ ತಂಡ ತನ್ನ ಪ್ರತಿಭೆ, ಪರಿಶ್ರಮ, ಶಿಸ್ತು ಮತ್ತು ಒಗ್ಗಟ್ಟಿನ ಮೂಲಕ ವಿವಿಧ ವೇದಿಕೆಗಳಲ್ಲಿ ಉಪ್ಪಳದ ಹೆಸರನ್ನು ಹೆಮ್ಮೆಯಿಂದ ಪ್ರತಿನಿಧಿಸುತ್ತಿರುವುದು ನಿಜಕ್ಕೂ ಗಮನಾರ್ಹವಾಗಿದೆ.

You cannot copy contents of this page