ಪಕ್ಷವಾತ: ಚಿಕಿತ್ಸೆ ಮಧ್ಯೆ ವ್ಯಕ್ತಿ ನಿಧನ

ಬದಿಯಡ್ಕ: ಇಲ್ಲಿಗೆ ಸಮೀಪದ ಕಂಗಣ್ಣಾರು ನಿವಾಸಿ ಅಬ್ಬಾಸ್ (58) ನಿಧನ ಹೊಂದಿದರು. ಮೊನ್ನೆ ಪಕ್ಷವಾತ ಉಂಟಾದ ಇವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಮಧ್ಯೆ ನಿನ್ನೆ ಸಂಜೆ ನಿಧನ ಸಂಭವಿಸಿದೆ. ಮೃತರು ಪತ್ನಿ ಜುವೇರಿಯಾ, ಮಕ್ಕಳಾದ ಮೊಹಮ್ಮದ್ ಆದಿಲ್, ತ್ವೈಬಾ, ಸಹೋದರ-ಸಹೋದರಿ ಯರಾದ ಇಬ್ರಾಹಿಂ, ಅಬ್ದುಲ್ಲ, ಬೀಫಾತಿಮ, ನಫೀಸ, ಸಕೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಮುಹಮ್ಮದ್ ಇಸ್ಮಾಯಿಲ್ ಮೂರು ತಿಂಗಳ ಹಿಂದೆಯಷ್ಟೇ ಹೃದಯಾಘಾತ ದಿಂದ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page