ಮುಸ್ಲಿಂಲೀಗ್‌ನಿಂದ ಹಿಂದೂ ಭಾವನೆಗೆ ದಕ್ಕೆ ತರುವ ಪ್ರಯತ್ನ-ಬಿಜೆಪಿ ಆರೋಪ

ಪೈವಳಿಕೆ: ಕಳೆದ ೩೭ವರ್ಷ ಗಳಿಂದ ಗಣೇಶ ಉತ್ಸವ, ಶ್ರೀ ಕೃಷ್ಣ ಜನ್ಮಾಷ್ಟಮಿ, ಶಬರಿಮಲೆ ಮಾಲೆ ಧಾರಣೆ ನಡೆಯುವ ಜೋಡುಕಲ್ಲು ಪ್ರದೇಶದಲ್ಲಿ ಮಂದಿರದ ಮುಂಭಾಗದ ಜಮೀನು ವಿಚಾರದಲ್ಲಿ ಮುಸ್ಲಿಂ ಲೀಗ್ ದೂರಿನ ಹಿನ್ನಲೆಯಲ್ಲಿ ಲೋಕೋಪ ಯೋಗಿ ಇಲಾಖೆ ಹಾಗೂ ಪೊಲೀಸ್ ಬೇಜವಾಬ್ದಾರಿತನ ಎದ್ದು ಕಾಣುತ್ತಿದ್ದು, ಶಾಂತಿ ಸಮಾಧಾನದಿಂದ ಇರುವ ತುಳುನಾಡಿನಲ್ಲಿ ಹಿಂದೂ ಧಾರ್ಮಿಕ ಆಚರಣೆಗಳಿಗೆ ದಕ್ಕೆ ತರುವ ಕೆಲಸ ವನ್ನು ಮುಸ್ಲಿಂ ಲೀಗ್ ವ್ಯವಸ್ಥಿತ ಅಜೆಂಡಾದ ಭಾಗವಾಗಿ ಮಾಡುತ್ತಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ.
ಸರಕಾರ ದಬ್ಬಾಳಿಕೆ ಬಿಟ್ಟು ಭಕ್ತರ ಬೇಡಿಕೆಗಳಿಗೆ ಸ್ಪಂದಿಸಿ ಸೌಹಾರ್ದತೆ ಯಿಂದ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ. ಎಂ. ಆಗ್ರಹಿಸಿದ್ದಾರೆ.

ಜೋಡುಕಲ್ಲು ಶ್ರೀ ಗಣೇಶ ಮಂದಿರ ರಕ್ಷಣೆಗೆ  ವಿಶ್ವ ಹಿಂದೂ ಪರಿಷತ್ ಕೂಡಾ ಇದೆ ಎಂದು, ಯಾವುದೇ ಕಾರಣಕ್ಕೂ ಮಂದಿರ ತೆರವುಗೊಳಿಸಲು ಬಿಡುವು ದಿಲ್ಲವೆಂದು ವಿಹಿಂಪ ವಿಶ್ವಹಿಂದೂ ಪರಿಷತ್ ಮಂಜೇಶ್ವರ ಪ್ರಖಂಡ ಕಾರ್ಯದರ್ಶಿ ರಂಜಿತ್ ಕೋಡಿಬೈಲು ತಿಳಿಸಿದ್ದಾರೆ.

RELATED NEWS

You cannot copy contents of this page