ರಾತ್ರಿ ಮರೆಯಲ್ಲಿ ಮಲಿನಜಲ ಮನೆ ಪರಿಸರದಲ್ಲಿ ಉಪೇಕ್ಷೆ: ದುರ್ವಾಸನೆ ಅಸಹನೀಯ; ಮನೆಮಂದಿಯ ದೂರಿನಂತೆ ತನಿಖೆ ಆರಂಭ

ಕಾಸರಗೋಡು: ರಾತ್ರಿ ಮರೆಯಲ್ಲಿ ಟ್ಯಾಂಕರ್ ಲಾರಿಯಲ್ಲಿ ತಂದ ಪಾಯಿಖಾನೆ ತ್ಯಾಜ್ಯವನ್ನು ಮನೆ ಪರಿಸರದಲ್ಲಿ ಉಪೇಕ್ಷಿಸಿರುವುದಾಗಿ ದೂರಲಾಗಿದೆ. ಮನೆ ಮಾಲಕ ನೀಡಿದ ದೂರಿನಂತೆ ಪೈವಳಿಕೆ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದರು. ಮಂಜೇಶ್ವರ ಪೊಲೀಸರು ಕೂಡಾ ತನಿಖೆಗೆ ಚಾಲನೆ ನೀಡಿದ್ದಾರೆ.

ಪೈವಳಿಕೆ ಪಂಚಾಯತ್‌ನ ಏದಾರ್ ನಿವಾಸಿ ರಾಮ ಎಂಬವರ ಮನೆ ಪರಿಸರದಲ್ಲಿ ನಿನ್ನೆ ರಾತ್ರಿ ಪಾಯಿಖಾನೆ ತ್ಯಾಜ್ಯವನ್ನು ಉಪೇಕ್ಷಿಸಲಾಗಿದೆ. ರಸ್ತೆಯಲ್ಲಿ ಟ್ಯಾಂಕರ್ ಲಾರಿ ನಿಲ್ಲಿಸಿ ಕೆಳಗಿನ ಸ್ಥಳಕ್ಕೆ ಪೈಪ್ ಮೂಲಕ ಮಲಿನ ಜಲವನ್ನು ಹರಿಯಬಿಡಲಾಗಿದೆ. ಇದರಿಂದ ರಸ್ತೆಯ ಕೆಳ ಭಾಗದಲ್ಲಿರುವ ಮನೆ ಪರಿಸರಕ್ಕೆ ಮಲಿನ ಜಲ ಹರಿದು ತಲುಪಿರುವುದಾಗಿಯೂ ದುರ್ವಾಸನೆ ಸಹಿಸಲಸಾಧ್ಯವಾಗುತ್ತಿದೆ ಎಂದು ಮನೆ ಮಂದಿ ದೂರಿದ್ದಾರೆ. ಸ್ಥಳಕ್ಕೆ ಪಂಚಾಯತ್ ಮಾಜಿ ಸಚಿವ ನಾರಾಯಣ ಏದಾರ್ ತಲುಪಿ ರಾಮ ಏದಾರ್ ಜೊತೆಗೆ ಪಂಚಾಯತ್ ಕಚೇರಿಗೆ ದೂರು ನೀಡಿದ್ದಾರೆ. ಬಳಿಕ ಪಂಚಾಯತ್ ಕಾರ್ಯದರ್ಶಿ ಶ್ರೀರಾಜ್, ಅಧ್ಯಕ್ಷ ರಾಘವೇಂದ್ರ ಭಟ್, ಸದಸ್ಯ ಸೈದ್ ಅಸೀಸ್ ಎಂಬಿವರು ಕೂಡಾ ಸ್ಥಳಕ್ಕೆ ತಲುಪಿದ್ದಾರೆ. ತ್ಯಾಜ್ಯ ಉಪೇಕ್ಷಿಸಿದ ವಾಹನವನ್ನು ಪತ್ತೆಹಚ್ಚಲು ವಿವಿಧ ಸ್ಥಳಗಳಲ್ಲಿರುವ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.

RELATED NEWS

You cannot copy contents of this page