ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ: ವೇದಿಕೆ ಸ್ಪರ್ಧೆಗಳಿಗೆ ಬದಿಯಡ್ಕದಲ್ಲಿ ಸಂಭ್ರಮದ ಚಾಲನೆ

ಬದಿಯಡ್ಕ: ಕುಂಬಳೆ ಉಪಜಿಲ್ಲಾ  ಶಾಲಾ ಕಲೋತ್ಸವದ ವೇದಿಕೆ ಸ್ಪರ್ಧೆಗಳಿಗೆ ಬದಿಯಡ್ಕದಲ್ಲಿ ಇಂದು ಬೆಳಿಗ್ಗೆ ಸಂಭ್ರಮದ ಚಾಲನೆ ನೀಡಲಾ ಯಿತು.  ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮೂರು ದಿನಗಳ ಕಾಲ  ಕಲೋತ್ಸವ ನಡೆಯಲಿದ್ದು, ಉಪಜಿಲ್ಲೆಯ ವಿವಿಧ ಶಾಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇದಕ್ಕಾಗಿ ಒಟ್ಟು 12 ವೇದಿಕೆಗಳನ್ನು ಸಿದ್ಧಪಡಿಸಲಾಗಿದೆ. ಎಲ್‌ಪಿ, ಯುಪಿ, ಹೈಸ್ಕೂಲ್, ಹೈಯರ್ ಸೆಕೆಂಡರಿ ವಿಭಾಗಗಳಲ್ಲಾಗಿ ವಿವಿಧ ಸ್ಪರ್ಧೆಗಳು ನಡೆಯಲಿದೆ. ಉಪಜಿಲ್ಲೆಯ 120 ಶಾಲೆಗಳಿಂದ ಸುಮಾರು 7 ಸಾವಿರದಷ್ಟು ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.  ಕಾರ್ಯಕ್ರಮಗಳನ್ನು ವೀಕ್ಷಿಸಲು ಸಮೀಪದ ಪ್ರದೇಶಗಳಿಂದ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಕೂಡಾ ತಲುಪುತ್ತಿದ್ದಾರೆ. ವೇದಿಕೇತರ ಸ್ಪರ್ಧೆಗಳು   ಅಕ್ಟೋಬರ್ 25, 26ರಂದು ನಡೆದಿತ್ತು.

ಕಲೋತ್ಸವದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು, ಅಧ್ಯಾಪಕರು, ಸಂಘಟಕರು ಹಾಗೂ ಇತರರಿಗೆ ರುಚಿಕರ ಹಾಗೂ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶದಿಂದ ಸಂಘಟನಾ ಸಮಿತಿ ಆಹಾರ ಪದಾರ್ಥಗಳ  ಸಂಗ್ರಹಣಾ ಕಾರ್ಯ ನಡೆಸಿದೆ.  ಬದಿಯಡ್ಕ ಪಂಚಾಯತ್ ಕಚೇರಿ ಸಮೀಪ ನಡೆದ ಆಹಾರ ಸಾಮಗ್ರಿಗಳ ಸಂಗ್ರಹ ಕಾರ್ಯಕ್ರಮವನ್ನು ಪಂಚಾ ಯತ್ ಅಧ್ಯಕ್ಷರೂ, ಸಂಘಟನಾ ಸಮಿತಿ ಅಧ್ಯಕ್ಷರೂ ಆಗಿರುವ ಡಿ. ಶಂಕರ ಉದ್ಘಾಟಿಸಿದರು.  ನಿವೃತ್ತ ಶಿಕ್ಷಕಿ ಪ್ರಭಾವತಿ ಕೆ. ಪುಂಡೂರು ಅವರು ಪಂ. ಅಧ್ಯಕ್ಷರಿಗೆ ಅಕ್ಕಿ, ತೆಂಗಿನಕಾಯಿ ಹಸ್ತಾಂ ತರಿಸುವ ಮೂಲಕ ಸಂಗ್ರಹ ಅಭಿ ಯಾನಕ್ಕೆ ಚಾಲನೆ ನೀಡಿದರು. ಜನಪ್ರತಿ ನಿಧಿಗಳು, ವಿವಿಧ ಸಮಿತಿಗಳ ಪದಾಧಿಕಾರಿಗಳು, ಅಧ್ಯಾಪಕರು ಉಪಸ್ಥಿತರಿದ್ದರು.

RELATED NEWS

You cannot copy contents of this page