ಜೋಡುಕಲ್ಲು ಗಣೇಶಮಂದಿರ ಸಂರಕ್ಷಣೆಗೆ ಕರಾವಳಿಯ ಸಮಸ್ತ  ಹಿಂದೂಗಳ ಬೆಂಬಲ- ಶಾಸಕ ಗುರುರಾಜ್ ಗಂಟಿಹೊಳೆ

ಮಂಜೇಶ್ವರ: ಜೋಡುಕಲ್ಲು ತಪೋ ಭೂಮಿ ಸಂರಕ್ಷಣೆ ಕಾಸರಗೋ ಡಿನ ಹಿಂದೂಗಳ ಮಾತ್ರ ಜವಾಬ್ದಾರಿ ಅಲ್ಲ, ಕಾಸರಗೋಡಿನಿಂದ ಬೈಂ ದೂರು ವರೆಗಿನ ಸಮಸ್ತ ಕರಾವಳಿಯ ಹಿಂದೂಗಳ ಬಹಿರಂಗ ಬೆಂಬಲ ಇದಕ್ಕಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿ ಹೊಳೆ ಹೇಳಿದರು. ಸ್ಥಳಕ್ಕೆ ಭೇಟಿ ನೀಡಿ ಅವರು ಬೆಂಬಲ ಘೋಷಣೆ ಮಾಡಿದರು. ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್, ಜೋಡುಕಲ್ಲು ಗಣೇಶ ಮಂದಿರ ಸಂರಕ್ಷಣಾ ಕ್ರಿಯಾ ಸಮಿತಿ ಅಧ್ಯಕ್ಷ ರವೀಶ್ ತಂತ್ರಿ, ಮುಖಂಡರಾದ ಸತಿಶ್ಚಂದ್ರ ಭಂಡಾರಿ, ವಿಜಯ್ ಕುಮಾರ್ ರೈ, ಆದರ್ಶ ಬಿ ಎಂ, ಲೋಕೇಶ್ ನೋಂಡÀ, ಎ.ಕೆ ಕಯÁ್ಯರ್ ಉಪಸ್ಥಿತರಿದ್ದರು.

You cannot copy contents of this page