ಕಬಡ್ಡಿ ಆಟಗಾರ್ತಿ ಶಾನ್ವಿ ಶೆಟ್ಟಿಗೆ ಬಿಜೆಪಿಯಿಂದ ಅಭಿನಂದನೆ

ವರ್ಕಾಡಿ: ಕರ್ನಾಟಕ ರಾಜ್ಯ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿರುವ ಶಾನ್ವಿ ಶೆಟ್ಟಿಯವರನ್ನು ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ಪರವಾಗಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಅಭಿನಂದಿಸಿದರು. ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದಿರುವ ಶಾನ್ವಿ ನಾಡಿನ ಹೆಮ್ಮೆಯಾಗಿದ್ದು, ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದು ಎಂ.ಎಲ್. ಅಶ್ವಿನಿ ಹೇಳಿದರು.
ಮಂಜೇಶ್ವರ ಮಂಡಲ ಬಿಜೆಪಿ ಅಧ್ಯಕ್ಷ ಆದರ್ಶ್ ಬಿ.ಎಂ., ಮಂಡಲ ಪ್ರಧಾನ ಕಾರ್ಯದರ್ಶಿ ಯತಿರಾಜ್ ಶೆಟ್ಟಿ, ವರ್ಕಾಡಿ ಪಂಚಾಯತ್ ಸಮಿತಿ ಬಿಜೆಪಿ ಅಧ್ಯಕ್ಷ ಭಾಸ್ಕರ ಪೊಯ್ಯೆ, ಪ್ರಧಾನ ಕಾರ್ಯದರ್ಶಿ ನಾಗೇಶ್ ಬಳ್ಳೂರು, ಜನಪ್ರತಿನಿಧಿ ಚಂದ್ರಶೇಖರ್ ಬಿ., ಗೋಪಾಲ್ ಶೆಟ್ಟಿ ಅರಿಬೈಲು, ಚಂಪಣ್ಣ ರೈ, ಪಂಚಾಯತ್ ಮಾಜಿ ಜನಪ್ರತಿನಿಧಿಗಳಾದ ಆನಂದ ತಚ್ಚಿರೆ, ರಾಜ್ ಕುಮಾರ್ ಶೆಟ್ಟಿ, ಕೃಷಿಕ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಶೆಟ್ಟಿ ವರ್ಕಾಡಿ, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮಮತಾ ಸಾಗರ್, ಜಗದೀಶ್ ಚೆಂಡೇಲ್, ರವಿರಾಜ್ ವರ್ಕಾಡಿ, ರಕ್ಷನ್, ಶ್ವೇತಾ ಪಾವಳ, ಸುಧಾಕರ್ ಶೆಟ್ಟಿ ಪಾವೂರು, ರಾಜೇಶ್, ಪ್ರಭಾಕರ್ ಶೆಟ್ಟಿ ಪಾವೂರು ಉಪಸ್ಥಿತರಿದ್ದರು. ನಾರಾಯಣ ಶೆಟ್ಟಿ-ಲಲಿತಾ ಶೆಟ್ಟಿ ದಂಪತಿ ಪುತ್ರಿಯಾದ ಶಾನ್ವಿ ಸೋಮೇಶ್ವರ ವಿದ್ಯಾರ್ಥಿನಿಯಾಗಿದ್ದಾರೆ.

RELATED NEWS

You cannot copy contents of this page