ಖ್ಯಾತ ಛಾಯಾಚಿತ್ರ ಗ್ರಾಹಕ ನಿಧನ

ಕೊಚ್ಚಿ: ಖ್ಯಾತ ಛಾಯಾಗ್ರಾಹಕ ಶಾಜಿ ಕುಮಾರ್ (53) ನಿಧನ ಹೊಂದಿದರು. ಎರ್ನಾಕುಳಂ ಪೆರುಂಬಾವೂರ್ ನಿವಾಸಿ ಯಾಗಿದ್ದಾರೆ. ದಿಲೀಪ್‌ನ ಹೊಸ ಸಿನಿಮಾದ ಶೂಟಿಂಗ್ ಮಧ್ಯೆ ಅಸ್ವಸ್ಥತೆ ಕಂಡುಬಂದ ಇವರನ್ನು ಮೂರು ದಿನದ ಹಿಂದೆ ಎರ್ನಾಕುಳಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ ನಿಧನ ಸಂಭವಿಸಿದೆ. ಮಲೆಯಾಳ ಸಿನಿಮಾಗಳಾದ ಪುಲಿಮುರುಗನ್, ನರನ್, ಒಡಿಯನ್ ಮೊದಲಾದ ಸಿನಿಮಾಗಳ ಛಾಯಾಗ್ರಾಹಕನಾಗಿದ್ದರು. ವೈಶಾಖ್, ಜೋಶಿ, ಶಾಜಿ ಕೈಲಾಸ್ ಮೊದಲಾದ ಖ್ಯಾತ ನಿರ್ದೇಶಕರ ಜೊತೆ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಇವರು ದುಡಿದಿದ್ದಾರೆ. ಆಕ್ಷನ್ ದೃಶ್ಯಗಳನ್ನು ಉತ್ತಮ ರೀತಿಯಲ್ಲಿ  ಚಿತ್ರೀಕರಿಸುವ ಸಾಮರ್ಥ್ಯ ಇವರಿಗಿತ್ತು. ಪುಲಿಮುರುಗನ್ ಸಿನಿಮಾಕ್ಕೆ ಏಷ್ಯಾವಿಶನ್ ಪ್ರಶಸ್ತಿ ಇವರಿಗೆ ಲಭಿಸಿದೆ. ಇವರ ಅತೀ ಮನೋಹರಂ, ಒಟ್ಟಕೊಂಬನ್ ಮೊದಲಾದ ಸಿನಿಮಾಗಳು ಇನ್ನಷ್ಟೇ ಪ್ರದರ್ಶನಕ್ಕೆ ಬರಬೇಕಾಗಿದೆ.

You cannot copy contents of this page