ವಿ.ಎಚ್.ಪಿ ಕಾಸರಗೋಡು ಪ್ರಖಂಡ ವತಿಯಿಂದ ಸಾಮೂಹಿಕ ಗೋಪೂಜೆ

ಕಾಸರಗೋಡು: ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡದ ವತಿಯಿಂದ ದೀಪಾವಳಿ ಪ್ರಯುಕ್ತ ಸಾಮೂಹಿಕ ಗೋಪೂಜೆ ಜರಗಿತು. ವಿ.ಎಚ್.ಪಿ ಕಾಸರಗೋಡು ಪ್ರಖಂಡ ಅಧ್ಯಕ್ಷ ಗುರುಪ್ರಸಾದ್ ಕೋಟೆಕಣಿ ಅಧ್ಯಕ್ಷತೆ ವಹಿಸಿದರು.
ವಿ.ಎಚ್.ಪಿ ಸತ್ಸಂಗ ಪ್ರಮುಖ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಮಾತನಾಡಿ, ಗೋವಿನ ಹಾಡಿನೊಂದಿಗೆ ಹಿಂದಿನ ಕಾಲದಲ್ಲಿ ಹಲವಾರು ಮನೆಗಳಲ್ಲಿ ಗೋವುಗಳನ್ನು ಸಾಕುತ್ತಿದ್ದು, ಗೋವುಗಳಿಗೆ ಮನೆಯ ಎಲ್ಲಾ ವಿಷಯಗಳು ಅದರ ಭಾವನೆಯಲ್ಲಿ ತಿಳಿಯುತ್ತಿತ್ತು. ಗೋವಿನ ಹಾಲು ಅದರಿಂದ ತಯಾರಿಸುವ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ, ಗೋಮೂತ್ರ, ಸೆಗಣಿ ಇತ್ಯಾದಿಗಳಿಂದ ವಾತಾವರಣ ಶುದ್ದಿಗೊಳ್ಳುವ ಬಗ್ಗೆ, ಅದರಿಂದ ಮನುಷ್ಯನಿಗೆ ಔಷಧೀಯ ಗುಣಗಳ ಮಹತ್ವದ ಬಗ್ಗೆ ಹಾಗೂ ದೀಪಾವಳಿಯ ಸಂಪ್ರದಾಯವನ್ನು ವಿವರಿಸಿದರು.
ವಿ.ಎಚ್.ಪಿ. ಮಾತೃ ಮಂಡಳಿಯ ಮಾತೆಯರು ಗೋವಿಗೆ ಗೋಗ್ರಾಸ ನೀಡಿ ಗೋಪೂಜೆ ಮಾಡಿದರು. ವಿ.ಎಚ್.ಪಿ. ಕಣ್ಣೂರು ವಿಭಾಗ ಜಂಟಿ ಕಾರ್ಯದರ್ಶಿ ಸಂಕಪ್ಪ ಭಂಡಾರಿ, ಕಾಸರಗೋಡು ನಗರ ಸಭಾ ಸದಸ್ಯ ಕೆ.ಎನ್. ರಾಮಕೃಷ್ಣ ಹೊಳ್ಳ, ವಿ.ಎಚ್.ಪಿ. ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಕಾರ್ಯಕರ್ತರಾದ ರವಿ ಕೇಸರಿ, ನವೀನ್ ಕೊರಕೋಡು, ಸಂತೋಷ್ ಕುಮಾರ್ ಭಂಡಾರಿ, ವಸಂತ ಕೆರೆಮನೆ, ಶ್ರೀನಿವಾಸ ಹೊಳ್ಳ, ಮಾತೃ ಮಂಡಳಿಯ ಶ್ರೀದೇವಿ ಎಸ್ ರಾವ್, ಶ್ರೀಲತಾ ಟೀಚರ್, ವಿಜಯ ಶೆಟ್ಟಿ, ಗೀತಾ, ಲೀಲಾ, ಶ್ರೀವಳ್ಳಿ, ಪ್ರೇಮ, ದಿವ್ಯಾಶ್ರೀ, ಸೂರ್ಯಕಾಂತಿ, ಸವಿತಾ, ಸೌಮ್ಯ, ಪ್ರಭಾ ರಾವ್, ಸರಸ್ವತಿ, ಸವಿತಾ ಆಳ್ವ, ಪುಷ್ಪಲತ, ಶ್ವೇತ, ಅರುಣ ಭಾಗವಹಿಸಿದರು. ವೆಂಕಟ್ರಮಣ ಬಾಲಗೋಕುಲದ ಪ್ರಮುಖರಾದ ಅನುಶ್ರೀ, ಛಾಯಾಶ್ರೀ, ವೈಭವಿ ಪ್ರಾರ್ಥನೆ ಹಾಡಿ, ವಿ.ಎಚ್.ಪಿ. ಕಾಸರಗೋಡು ಪ್ರಖಂಡ ಉಪಾಧ್ಯಕ್ಷ ಲಕ್ಷ್ಮೀಕಾಂತ ನೆಲ್ಲಿಕುಂಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ನಿರೂಪಿಸಿ, ಉಪಾಧ್ಯಕ್ಷ ಗುಣಪಾಲ ಅಮೈ ವಂದಿಸಿದರು.

You cannot copy contents of this page