ಮುಳ್ಳೇರಿಯ: ಕಾರ್ಯಕ್ರಮದ ವೇದಿಕೆಯಲ್ಲಿ ವಂದೇ ಮಾತರಂ ಪೂರ್ಣವಾಗಿ ಹಾಡಿರುವುದಕ್ಕೆ ರಾಜ್ಯ ಆರೋಗ್ಯ ಖಾತೆ ಸಚಿವ ಕೆ. ಮುರಳೀಧರನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಳ್ಳೇರಿಯ ಕುಟುಂಬ ಆರೋಗ್ಯ ಕೇಂದ್ರದ ಲ್ಯಾಬ್ ಉದ್ಘಾಟನೆ ಕಾರ್ಯಕ್ರ ಮದಲ್ಲಿ ಈ ವಿದ್ಯಮಾನ ನಡೆದಿದೆ. ವಂದೇ ಮಾತರಂ ಪೂರ್ಣವಾಗಿ ಹಾಡಿ ಪೂರ್ತಿಗೊಳಿ ಸುವ ಮೊದಲು ಸಚಿವ ತನ್ನ ಆಸನದಲ್ಲಿ ಕುಳಿತಿದ್ದಾರೆ. ಅದರ ಬೆನ್ನಲ್ಲೇ ಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್, ಸಂಸದ ರಾಜ್ಮೋಹನ್ ಉಣ್ಣಿತ್ತಾನ್, ಶಾಸಕ ಕಲ್ಲಟ್ರ ಮಾಹಿನ್ ಕೂಡಾ ಕುಳಿತುಕೊಂಡರು. ಆದರೆ ಶಾಸಕ ಕೆ. ನೀಲಕಂಠನ್, ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ವಂದೇ ಮಾತರಂ ಪೂರ್ಣವಾಗಿ ಹಾಡಿ ಮುಗಿಯುವವರೆಗೆ ನಿಂತುಕೊಂಡಿದ್ದರು.
ಸರಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಪೂರ್ಣವಾಗಿ ಹಾಡಲಾಗುವುದಿಲ್ಲವೆಂಬ ತೀರ್ಮಾನವನ್ನು ಕಾಂಗ್ರೆಸ್ ಕೈಗೊಂಡಿತ್ತು. ಆದರೆ ನಿನ್ನೆಯ ಕಾರ್ಯಕ್ರಮದ ವೇದಿಕೆಯಲ್ಲಿ ವಂದೇ ಮಾತರಂ ಹಾಡಲು ಜವಾಬ್ದಾರಿ ವಹಿಸಿಕೊಂಡವರು ಅದನ್ನು ಪೂರ್ಣವಾಗಿ ಹಾಡಿದ್ದಾರೆ. ಕಾರ್ಯಕ್ರಮದ ಸಂಘಟಕರಿಗೂ ಈ ಕುರಿತು ತಿಳಿದಿರಲಿಲ್ಲ ಎಂಬುದಾಗಿ ಸ್ಪಷ್ಟೀಕರಣ ನೀಡಲಾಗಿದೆ.
ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಕಾರ್ಯಕ್ರಮದ ಬಳಿಕ ಸಂಘಟಕರೊಂದಿಗೆ ಈ ಬಗ್ಗೆ ತಿಳಿಸಿದ್ದಾರೆ. ಅಧಿಕೃತ ಕಾರ್ಯಕ್ರಮ ಗಳಲ್ಲಿ ವಂದೇ ಮಾತರಂ ಪೂರ್ಣವಾಗಿ ಹಾಡಬೇಕೆಂದು ಕೇಂದ್ರ ಸರಕಾರ ನಿರ್ದೇಶ ನೀಡಿದ್ದರೂ ಮೊದಲ ಎರಡು ಭಾಗವನ್ನು ಮಾತ್ರ ಹಾಡಿದರೆ ಸಾಕು ಎಂಬುದಾಗಿದೆ ಕಾಂಗ್ರೆಸ್ನ ನಿಲುವು. ಇದೇ ವೇಳೆ ವಂದೇ ಮಾತರಂ ಹಾಡಿ ಮುಗಿಯುವುದರ ಮೊದಲು ಜನಪ್ರತಿನಿಧಿಗಳು, ಅಧಿಕಾರಿಗಳು ಕುಳಿತುಕೊಂಡಿರುವುದು ಗಂಭೀರ ಕಾನೂನು ಉಲ್ಲಂಘನೆಯಾಗಿ ದೆಯೆಂದೂ ಇದರಿಂದ ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡಲಾಗಿದೆ ಯೆಂದು ಬಿಜೆಪಿ ನಾಯಕತ್ವ ಆರೋಪಿಸಿದೆ.
ವಂದೇ ಮಾತರಂಗೆ ಅಗೌರವ ತೋರಿಸಿದ ಸಚಿವ ಕೆ. ಮುರಳೀ ಧರನ್ ಸಂಸದ ರಾಜ್ಮೋಹನ್ ಉಣ್ಣಿತ್ತಾನ್,ಶಾಸಕ ಕಲ್ಲಟ್ರ ಮಾಹಿನ್ ದೇಶದೊಂದಿಗೆ ಕ್ಷಮೆ ಯಾಚಿಸಬೇಕು. ಅದರಲ್ಲೂ ಜಿಲ್ಲಾಧಿಕಾರಿಯ ವರ್ತನೆ ಯನ್ನು ಗಂಭೀರವಾಗಿ ಕಾಣಬೇಕಾಗಿದೆ. ಅವರು ರಾಜಕೀಯ ನೇತಾರೆಯಲ್ಲ. ಸಂವಿಧಾನ ಹಾಗೂ ಕಾನೂನು ವ್ಯವಸ್ಥೆಯನ್ನು ಸಂರಕ್ಷಿಸಲು ಹೊಣೆಗಾ ರಿಕೆಯುಳ್ಳ ಅಧಿಕಾರಿಯಾಗಿದ್ದಾರೆ. ಅವರ ನಡವಳಿಕೆಯನ್ನು ಯಾವುದೇ ರೀತಿಯಲ್ಲಿ ಅಂಗೀಕರಿಸಲಾಗದು. ಜಿಲ್ಲಾಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇತರರು ಕುಳಿತು ಕೊಂಡಾಗ ವಂದೇ ಮಾತರಂಗೆ ಗೌರವ ಸೂಚಿಸಿ ನಿಂತುಕೊಂಡಿದ್ದ ಉದುಮ ಶಾಸಕ ಕೆ. ನೀಲಕಂಠನ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿಯೂ ಬಿಜೆಪಿ ನೇತಾರ ಕೆ. ಶ್ರೀಕಾಂತ್ ತಿಳಿಸಿದ್ದಾರೆ. ಅಧಿಕೃತ ಸ್ಥಾನದಲ್ಲಿರುವ ಜಿಲ್ಲಾಧಿಕಾರಿ ಸಹಿತ ಇತರರು ವಂದೇ ಮಾತರಂನೊಂದಿಗೆ ಅಗೌರವ ತೋರಿಸಿರುವುದರ ವಿರುದ್ದ ಕಠಿಣ ಕಾನೂನುಕ್ರಮಗಳೊಂದಿಗೆ ಮುಂದೆ ಸಾಗುವುದಾಗಿ ಬಿಜೆಪಿ ತಿಳಿಸಿದೆ.
ಮುಳ್ಳೇರಿಯ ಎಫ್ಎಚ್ಸಿ ನೂತನ ಲ್ಯಾಬ್ ಕಟ್ಟಡ ಉದ್ಘಾಟನೆ
ಬಳಿಕ ಮುಳ್ಳೇರಿಯ ಕುಟುಂಬ ಆರೋಗ್ಯ ಕೇಂದ್ರದ ನೂತನ ಲ್ಯಾಬ್ ಕಟ್ಟಡವನ್ನು ಸಚಿವ ಕೆ. ಮುರಳೀಧರನ್ ಉದ್ಘಾಟಿಸಿದರು. ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷತೆ ವಹಿಸಿದರು. ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಲ್ಯಾಬ್, ಸಭಾಂಗಣವನ್ನು ಶಾಸಕ ಕೆ. ನೀಲಕಂಠನ್, ಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್ ಎಂಡೋಸಲ್ಫಾನ್ ಕೊಠಡಿ ಉದ್ಘಾಟಿಸಿದರು. ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಎನ್.ಟಿ. ತುಳಸಿ ವರದಿ ಮಂಡಿಸಿದರು. ಕಾರಡ್ಕ ಬ್ಲೋಕ್ ಪಂ. ಅಧ್ಯಕ್ಷ ಸಿ. ಬಾಲನ್, ಮಾಜಿ ಶಾಸಕ ಎನ್.ಎ. ನೆಲ್ಲಿಕುನ್ನು, ಜಿ.ಪಂ. ಸದಸ್ಯೆ ಒ. ವತ್ಸಲ, ಪಂಚಾಯತ್ ಉಪಾಧ್ಯಕ್ಷ ದಾಮೋದರ ರಾವ್, ವಿ. ಚಂದ್ರನ್, ಎ. ವಸಂತಿ, ಪಿ. ಸವಿತ ಕುಮಾರಿ, ಎ. ಬಾಲಕೃಷ್ಣನ್, ರೂಪಾ ಸತ್ಯನ್, ಡಾ. ಕೆ.ಟಿ. ರೇಖ, ಡಾ. ಧನ್ಯಾ ದಯಾನಂದನ್, ಪಂ. ಸದಸ್ಯರು, ಹಲವು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದರು. ಪಂಚಾಯತ್ ಅಧ್ಯಕ್ಷೆ ಜನನಿ ಸ್ವಾಗತಿಸಿ, ಡಾ. ಎಸ್.ಎಂ. ಸಜೀರ್ ವಂದಿಸಿದರು.






