ಹೊಸದುರ್ಗ: ಯುವತಿ ಯೋರ್ವೆ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ರಾವಣೇಶ್ವರ ತೆಕ್ಕೇಪಳ್ಳ ನಿವಾಸಿ ಟಿ. ಶ್ವೇತ (25) ಎಂಬಾಕೆ ನಾಪತ್ತೆಯಾದ ಯುವತಿ. ಕಳೆದ ಶನಿವಾರ ಸಂಜೆ 3 ಗಂಟೆಗೆ ಮನೆಯಿಂದ ಹೋದ ಈಕೆ ಮರಳಿ ಬಂದಿಲ್ಲವೆಂದು ದೂರಲಾಗಿದೆ. ಸ್ನೇಹಿತ ಜಾಫರ್ ಎಂಬಾತನೊಂದಿಗೆ ಹೋಗಿರ ಬಹುದೆಂದು ಸಂಶಯಿಸುತ್ತಿ ರುವುದಾಗಿ ತಂದೆ ಹೊಸದುರ್ಗ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.






