ಕುಂಬಳೆ: ಬ್ಯಾಂಕ್ ಆಫ್ ಬರೋಡಾದ ಇಂಟರ್ನೆಟ್ ಮೊಬೈಲ್ ಬ್ಯಾಂಕಿಂಗ್ ಡೌನ್ಲೋಡ್ ಗೈಯ್ಯಲು ಸಹಾಯ ಮಾಡುವುದಾಗಿ ವಾಟ್ಸಪ್ನಲ್ಲಿ ಸಂದೇಶ ಮತ್ತು ಒಟಿಪಿ ಕಳುಹಿಸಿಕೊಟ್ಟ ಬಳಿಕ ಕುಂಬಳೆ ನಿವಾಸಿಯ ಬ್ಯಾಂಕ್ ಖಾತೆಯಿಂದ ಸೈಬರ್ ವಂಚನೆಗಾರರು ಎರಡು ಲಕ್ಷ ರೂ. ವಂಚಿಸಿದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಕುಂಬಳೆ ಫೆರಿ ಬಳಿಯ ನಿವಾಸಿ ಎಂ.ಎಸ್. ದೇವರಾಜನ್ ಎಂಬವರ ಬ್ಯಾಂಕ್ ಖಾತೆಯಿಂದ ಅವರಿಗೆ ತಿಳಿಯದೆ ಈ ರೀತಿ ಹಣ ಎಗರಿಸಲಾಗಿದೆ ಎಂದು ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನ.10ರಂದು ತನ್ನ ಬ್ಯಾಂಕ್ ಖಾತೆಯಿಂದ ಈ ರೀತಿ ವಂಚಿಸಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ದೇವರಾಜನ್ ತಿಳಿಸಿದ್ದಾರೆ.






