ಮೀಯಪದವು: ತಲೇಕ್ಕಳ ಮದಂಗಲ್ಲು ಶ್ರೀ ಧೂಮಾವತಿ ದೈವಸ್ಥಾನದ ಕಚೇರಿ ಹಾಗೂ ಸ್ಟೋರ್ರೂಂನ ಬೀಗ ಮುರಿದು ಒಳಗಡೆಯಿದ್ದ ತಾಮ್ರದ ಕೊಪ್ಪರಿಗೆ ಸಹಿತ ಪಾತ್ರೆಗಳು, ದೀಪಗಳು ಮೊದಲಾದ ತಾಮ್ರದ ವಸ್ತುಗಳನ್ನು ಕಳವುಗೈಯ್ಯಲಾಗಿದೆ. ಒಟ್ಟು ಸುಮಾರು ಎರಡೂವರೆ ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ನವೆಂಬರ್ 1ರಂದು ಸಂಜೆ 4ಗಂಟೆಯಿಂದ 9ರಂದು ಬೆಳಿಗ್ಗೆ 11ರ ಮಧ್ಯೆ ಈ ಕಳವು ನಡೆದಿರುವು ದಾಗಿ ಶಂಕಿಸಲಾಗಿದೆ. 9ರಂದು ದೀಪಾವಳಿ ಕಾರ್ಯಕ್ರಮ ನಿಮಿತ್ತ ಆಗಮಿಸಿದ ವೇಳೆ ಕಳವು ಗಮನಕ್ಕೆ ಬಂದಿದೆ. ಈ ಬಗ್ಗೆ ದೈವಸ್ಥಾನದ ಅಧ್ಯಕ್ಷ ಕೃಷ್ಣ ಪ್ರಸಾದ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದು, ಕೇಸು ದಾಖಲಿಸಿದ್ದಾರೆ. ನಿನ್ನೆ ದೈವಸ್ಥಾನಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ತಲುಪಿ ತಪಾಸಣೆ ನಡೆಸಿದ್ದಾರೆ.






