ಕುಂಬಳೆ: ಬಂಬ್ರಾಣ ಅಂಬಿಲಡ್ಕ ನಿವಾಸಿಯಾಗಿದ್ದು, ಮಂಗಳೂರಿನ ಖಾಸಗಿ ಬ್ಯಾಂಕ್ನಲ್ಲಿ ಮೆನೇಜರ್ ಆಗಿರುವ ಅಖಿಲ್ ಆಳ್ವ (32) ಹೃದಯಾಘಾತದಿಂದ ನಿಧನ ಹೊಂದಿದರು. ನಿನ್ನೆ ಬೇಕೂರಿನ ಪತ್ನಿ ಮನೆಗೆ ತಲುಪಿದ್ದ ಇವರು ಅಲ್ಲಿ ರಾತ್ರಿ ಕುಸಿದು ಬಿದ್ದಿದ್ದಾರೆ. ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಪತ್ನಿಯ ತಂದೆ ಬೆಂಗಳೂರಿನಿಂದ ನಿನ್ನೆ ಮನೆಗೆ ತಲುಪಿದ ಹಿನ್ನೆಲೆಯಲ್ಲಿ ಇವರು ಪತ್ನಿಯ ಮನೆಗೆ ತೆರಳಿದ್ದರು. ಮೃತರು ತಂದೆ ಕೃಷ್ಣ ಆಳ್ವ, ತಾಯಿ ಚಂದ್ರಾವತಿ, ಪತ್ನಿ ಮಧುಶ್ರೀ, ಸಹೋದರ ಅಶೋಕ ಆಳ್ವ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






