ಮಂಜೇಶ್ವರ: ಹೊಸಂಗಡಿ ಬಳಿಯ ಕಟ್ಟೆ ಬಜಾರ್ ನಿವಾಸಿ ಕುವೈತ್ನ ಉದ್ಯೋಗ ಸ್ಥಳದಲ್ಲಿ ಹೃದಯಾಘಾತಗೊಂಡು ಕುಸಿದು ಬಿದ್ದು ಮೃತಪಟ್ಟರು. ಧಾರ್ಮಿಕ, ಸಾಮಾಜಿಕ ಮುಂದಾಳು ಹೈಮೇಶ ಬಿ.ಎಂ -ವೀಣಾ ದಂಪತಿ ಪುತ್ರ ಕಿರಣ್ರಾಜ್ (42) ಮೃತಪಟ್ಟ ವ್ಯಕ್ತಿಯÁಗಿದ್ದಾರೆ. ಭಾನುವಾರ ಸಂಜೆ 5.30 ರ ವೇಳೆ ತಮ್ಮ ಕಚೇರಿಯಲ್ಲಿ ಹೃದಯಾಘಾತಗೊಂಡು ಕುಸಿದು ಬಿದ್ದಿದ್ದರು. ಕೂಡಲೇ ಸಿಬ್ಬಂದಿಗಳು ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಕಿರಣ್ರಾಜ್ ಕಳೆದ 20 ವರ್ಷಗಳಿಂದ ಕುವೈತ್ನಲ್ಲಿ ಉದ್ಯೋಗದಲ್ಲಿದ್ದರು. ಕಳೆದ 5 ವರ್ಷದಿಂದ ಕೈತನ್ನ ಪಾನ್ ಗ್ಲೋಬಲ್ ಕಂಪೆನಿಯಲ್ಲಿ ಮೆನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಜೊತೆಗೆ ಪತ್ನಿ ಮಕ್ಕಳ ಜೊತೆ ಕುವೈತ್ನಲ್ಲಿ ವಾಸಿಸುತ್ತಿದ್ದರು. ಮೃತದೇಹವನ್ನು ಮಹಜರು ನಡೆಸಿ ನಾಳೆ ವಿಮಾನದಲ್ಲಿ ಊರಿಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ.
ಮೃತರು ತಂದೆ, ತಾಯಿ, ಪತ್ನಿ ಶಿಲ್ಪಾ, ಮಕ್ಕಳಾದ: ಇಶಾನ್ವಿ, ಈವ್ಯವನ್, ಸಹೋದರಿಯರಾದ: ರಮ್ಯ, ರಶ್ಮಿ, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತ ಕಿರಣ್ರಾಜ್ ಕುವೈತ್ ಬಿಲ್ಲವ ಸಂಘದಲ್ಲಿ ಕಳೆದ 2 ವರ್ಷಗಳಿಂದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸು ತ್ತಿದ್ದಾರೆ. ಕುವೈತ್ನ ಎಂಬಸಿಯಲ್ಲಿ ಕಳೆದ ಎರಡು ವರ್ಷಗಳಿಂದ ಭಾರತದ ಗಣರಾಜ್ಯೋತ್ಸವ ದಿನದಂದು ಹುಲಿವೇಷ ಪ್ರದರ್ಶನ ನೀಡುವುದರೊಂದಿಗೆ ಇವರು ಹುಲಿವೇಷದಾರಿಯಾಗಿ ಇತರರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಪತ್ನಿ ಮಕ್ಕಳ ಜೊತೆ ಜೂನ್ನಲ್ಲಿ ಊರಿಗೆ ಬಂದು ಹಿಂತಿರುಗಿದ್ದರು. ದಾನಿಯಾಗಿರುವ ಕಿರಣ್ರಾಜ್ ಸಾಮಾಜಿಕ ಕ್ಷೇತ್ರಕ್ಕೆ ತನ್ನಿಂದಾದ ಸಹಕಾರವನ್ನು ನೀಡುತ್ತಿದ್ದರು. ಅಲ್ಲದೆ ಕಟ್ಟೆ ಫ್ರೆಂಡ್ಸ್ ಕಟ್ಟೆ ಬಜಾರ್ನಲ್ಲಿ ಅನೇಕ ವರ್ಷ ವಿವಿಧ ಪದಾಧಿಕಾರಿ ಹುದ್ದೆಯಲ್ಲಿ ದುಡಿದಿದ್ದರು. ಊರಿನ ಅನೇಕ ಸಂಘ ಸಂಸ್ಥೆಗಳಿಗೆ, ಕ್ಷೇತ್ರ, ಮಠ, ಮಂದಿರಗಳ ಜೀರ್ಣೋದ್ಧಾರಕ್ಕೆ ಸಹಾಯ ಹಸ್ತ ನೀಡುತ್ತಿದ್ದರು. ನಿಧನಕ್ಕೆ ಕಟ್ಟೆ ಫ್ರೆಂಡ್ಸ್ ಕಟ್ಟೆ ಬಜಾರ್, ಕನಿಲ ಶ್ರೀ ಭಗವತೀ ಕ್ಷೇತ್ರ ಸಮಿತಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಂಜೇಶ್ವರ, ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ, ಚಕ್ರವರ್ತಿ ಹೊಸಂಗಡಿ, ರಾಯರ ಭಕ್ತರು ಮಂಜೇಶ್ವರ ಸಂತಾಪ ವ್ಯಕ್ತಪಡಿಸಿದೆ.






