ಕಾಸರಗೋಡು: ಕಾಸರಗೋಡು ಪೊಲೀಸರು ನಿನ್ನೆ ಸಂಜೆ ನಗರದ ಮನೆಯೊಂದಕ್ಕೆ ದಾಳಿ ನಡೆಸಿ ಅಲ್ಲಿ ಬಚ್ಚಿಡಲಾಗಿದ್ದ ಮಾದಕದ್ರವ್ಯವಾದ 38.760 ಗ್ರಾಂ ಎಂಡಿಎಂಎ ಮತ್ತು 6.650 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿ ಕಾಸರಗೋಡು ನುಳ್ಳಿಪ್ಪಾಡಿ ರಿಫಾಯ್ ಮಂಜಿಲ್‌ನ ರಾಬಿಯತ್ ಎನ್.ಎಚ್. (39), ಕೂಡ್ಲು ಸೂರ್ಲು ಕರಿಪ್ಪೊಡಿ ರಸ್ತೆಯ ಮಲಬಾರ್ ಹೌಸ್‌ನ ಫರ್ಹಾನ್ ಎ.ಐ. (30) ಮತ್ತು ಮುಟ್ಟತ್ತೋಡಿ ಹಿದಾಯತ್ ನಗರ ಸೆಕೆಂಡರ್ ಸ್ಟ್ರೀಟ್‌ನ ಇಸ್ಸತ್ ನಗರದ ಎ.ಎಂ. ಹೌಸ್‌ನ ಮುಹಮ್ಮದ್ ಸಾಧಿಕ್ (32) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯ ಎಸ್‌ಐ ವಿಷ್ಣು ಎಲ್‌ರ ನೇತೃತ್ವದಲ್ಲಿ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯವರ ಡಾನ್ಸಾಪ್ ತಂಡ ನಿನ್ನೆ ಸಂಜೆ ನಗರದ ನುಳ್ಳಿಪ್ಪಾಡಿ ಪಿ.ಎಂ.ಎಸ್ ರಸ್ತೆ ಬಳಿಯಿರುವ ಈ ಪ್ರಕರಣದ ಒಂದನೇ ಆರೋಪಿ ರಾಬಿಯತ್‌ನ ಮನೆಗೆ ದಿಡೀರ್ ದಾಳಿ ನಡೆಸಿ ತಪಾಸಣೆ ನಡೆಸಿದಾಗ ಆತನ ಬೆಡ್‌ರೂಮ್‌ನಲ್ಲಿ ಈ ಮಾದಕವಸ್ತುಗಳನ್ನು ಪತ್ತೆಹಚ್ಚಿದ್ದಾರೆ. ಅದಕ್ಕೆ ಸಂಬಂಧಿಸಿ ರಾಬಿಯತ್ ಸೇರಿದಂತೆ ಇತರ ಇಬ್ಬರು ಆರೋಪಿಗಳನ್ನು ಮಾಲು ಸಹಿತ ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳ ಲಾಯಿತೆಂದು ಪೊಲೀಸರು ತಿಳಿಸಿದ್ದಾರೆ. ಈ ಮಾದಕ ದ್ರವ್ಯವನ್ನು ಆರೋಪಿಗಳು ಮಾರಾಟಕ್ಕಾಗಿ ಮನೆಯಲ್ಲಿ ಬಚ್ಚಿಟ್ಟಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಕಾಸರಗೋಡು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮೆಲ್ವಿನ್ ಜೋಸ್‌ರ ಮೇಲ್ನೋಟದಲ್ಲಿ ಪೊಲೀಸ್ ಈ ಕಾರ್ಯಾಚರಣೆ ನಡೆದಿದೆ.






