ಕನಿಷ್ಠ ವೆಚ್ಚದಲ್ಲಿ ಜಿಲ್ಲಾ ಪಂಚಾಯತ್ ಅತೀ ವೇಗ ಚಾರ್ಜಿಂಗ್ ಕೇಂದ್ರ ಲೋಕಾರ್ಪಣೆ

ಕಾಸರಗೋಡು: ಪ್ರಕೃತಿ ಸೌಹಾರ್ದ ಸಾರಿಗೆ ವ್ಯವಸ್ಥೆಗಳನ್ನು ಪ್ರೋತ್ಸಾಹಿ ಸುವುದರಲ್ಲಿ ರಾಜ್ಯಕ್ಕೆ ಮಾದರಿಯಾದ ಕಾಸರಗೋಡು ಜಿಲ್ಲಾ ಪಂಚಾಯತ್ ನಿರ್ಮಿಸಿದ ಇಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್‌ನ್ನು ಇಂದು ಬೆಳಿಗ್ಗೆ ಸಚಿವ ಕೆ.ಎಂ. ಶಾಜಿ ಸಾರ್ವಜನಿಕರಿಗೆ ತೆರೆದುಕೊಟ್ಟರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷತೆ ವಹಿಸಿದರು.

ರಾಜ್ಯದಲ್ಲಿ ಪ್ರಥಮವಾಗಿ ಜಿಲ್ಲಾ ಪಂಚಾಯತ್ ಸ್ವಂತವಾಗಿ ಇಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ನಿರ್ಮಿಸಿದೆ. ೨೦೨೬-೨೭ನೇ ವಾರ್ಷಿಕ ಯೋಜನೆಯಲ್ಲಿ ಸೇರಿಸಿ  ಅತೀ ವೇಗ ಚಾರ್ಜಿಂಗ್ ಸ್ಟೇಷನ್ ಸಾಕಾರಗೊಳಿಸಲಾಗಿದೆ. ಜಿಲ್ಲಾ ಪಂಚಾಯತ್‌ನ ಸಮೀಪದಲ್ಲೇ ಉಪಯೋಗಶೂನ್ಯವಾದ ಸ್ಥಳವನ್ನು ಇದಕ್ಕಾಗಿ ಉಪಯೋಗಿಸಿಕೊ ಳ್ಳಲಾಗಿದೆ. ಏಕಬಾರಿ ಎರಡು ಕಾರುಗಳು, ಎರಡು ದ್ವಿಚಕ್ರ ವಾಹನಗಳನ್ನು ಇಲ್ಲಿ ಚಾರ್ಜ್ ಮಾಡಬಹುದಾಗಿದೆ. ಕನಿಷ್ಟ ದರದಲ್ಲಿ ಇಲ್ಲಿಂದ ಚಾರ್ಜ್ ಮಾಡಬಹುದಾಗಿದ್ದು, ಪೆಟ್ರೋಲ್- ಡೀಸೆಲ್ ವಾಹನಗಳಿಂದಿರುವ ವಾತಾವರಣ ಮಲಿನೀಕರಣವನ್ನು ನಿಯಂತ್ರಿಸಲು ಉದ್ದೇಶಿಸಲಾಗಿದೆ. 

RELATED NEWS

You cannot copy contents of this page