ಮಂಜೇಶ್ವರ ಬ್ಲೋಕ್ ಪಂಚಾಯತ್‌ನಲ್ಲಿ 17 ಲಕ್ಷ ರೂ. ವಂಚನೆ ಆರೋಪಿಗಳನ್ನು ಬಂಧಿಸದಿರಲು ಕಾರಣವೇನು- ಬಿಜೆಪಿ ಪ್ರಶ್ನೆ

ಹೊಸಂಗಡಿ: ಮಂಜೇಶ್ವರ ಬ್ಲಾಕ್ ಪಂಚಾಯತ್‌ನಲ್ಲಿ ಬಡವರಿಗೆ ನೀಡಬೇಕಾದ ಪಿ ಎಂ ಆವಾಜï ಯೋಜನೆಯ 17ಲಕ್ಷ ರೂ. ತನ್ನ ಸ್ವಂತ ಖಾತೆಗೆ ವರ್ಗಯಿಸಿ ವಂಚನೆ ಮಾಡಿದ ಆರೋಪಿಯನ್ನು 20ದಿನ ಕಳೆದರು ಬಂದಿsಸದೆ ಇರುವುದು ಯಾರನ್ನು ಸಂರಕ್ಷಿಸಲು ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಪ್ರಶ್ನಿಸಿದ್ದಾರೆ. ಬ್ಲಾಕ್ ಆಡಳಿತ ಸಮಿತಿ ಅಧ್ಯಕ್ಷರ ಕೈವಾಡ ಇಲ್ಲದಿದ್ದರೆ ಲೂಟಿ ಆಗಿರುವ 17ಲಕ್ಷ ರೂ. ಬ್ಲಾಕ್ ಪಂಚಾಯತ್ ವಶ ಪಡಿಸಲು ಯಾಕೆ ಪೊಲೀಸ್ ಇಲಾಖೆಗೆ ಹಾಗೂ ಜಿಲ್ಲಾಧಿಕಾರಿ, ಡಿಡಿಒರಲ್ಲಿ ಬ್ಲಾಕ್ ಆಡಳಿತ ಸಮಿತಿ ಒತ್ತಡ ಹೇರುತ್ತಿಲ್ಲ ಎಂದು ಪ್ರಶ್ನೆ ಮಾಡಿದೆ. ಆರೋಪಿಗೆ ನಿರೀಕ್ಷಣಾ ಜÁಮೀನು ಸಿಗುವಂತೆ ಮಾಡಲು ಬಂಧಿಸಲಾಗುತ್ತಿಲ್ಲ ಎಂದು ಬಿಜೆಪಿ ದೂರಿದೆ. ಈ ಬಗ್ಗೆ ತನಿಖೆ ಮಾಡಬೇಕೆಂದು ಬಿಜೆಪಿ ವಿಜಿಲೆನ್ಸ್ಗೆ ದೂರು ನೀಡಿದೆ. ಆದರೆ ವಿಜಿಲೆನ್ಸ್ ಕೇರಳ ಆಡಳಿತ ಪಕ್ಷವಾದ ಯುಡಿಎಫ್ ಆದೇಶದಂತೆ ಮುಸ್ಲಿಂ ಲೀಗ್ ಆಡಳಿತದ ಮಂಜೇಶ್ವರ ಬ್ಲಾಕ್ ಪಂಚಾಯತ್‌ಗೆ ದಾಳಿ ಮಾಡದೆ, ತನಿಖೆ ಆರಂಭಿಸದೆ ಇರುವುದು ಈ ವಂಚನೆಯಲ್ಲಿ ಉನ್ನತ ಕೈ ವಾಡ ಶಂಕೆ ಮೂಡುತ್ತಿದೆ. ಮಂಜೇಶ್ವರ ಶಾಸಕರು ಕೂಡ ವಂಚನೆ ಬಗ್ಗೆ ಧ್ವನಿ ಎತ್ತದೆ ಇರುವುದು ಭ್ರಷ್ಟಾಚಾರಕ್ಕೆ ಬಾಹ್ಯ ಬೆಂಬಲವೇ ಎಂದು ಬಿಜೆಪಿ ಲೇವಡಿ ಮಾಡಿದೆ.
ಆರೋಪಿಗಳನ್ನು ಬಂದಿsಸದೆ ಇದ್ದರೆ, ವಿಜಿಲೆನ್ಸ್ ತನಿಖೆ ಆರಂಭಿಸ ದಿದ್ದರೆ ಬಿಜೆಪಿ ಬ್ಲಾಕ್ ಕಚೇರಿ ಮುಂದೆ ನಿರಂತರ ಪ್ರತಿಭಟನೆಗೆ ಮುಂದಾ ಗಲಿದೆ ಎಂದು ಬಿಜೆಪಿ ತಿಳಿಸಿದೆ.

RELATED NEWS

You cannot copy contents of this page