ವರದಕ್ಷಿಣೆಗಾಗಿ ಯುವತಿಗೆ ಕಿರುಕುಳ : ಪತಿ ಸಹಿತ ಮೂವರ ವಿರುದ್ಧ ಕೇಸು

ಕುಂಬಳೆ: ವರದಕ್ಷಿಣೆಗಾಗಿ ಒತ್ತಾಯಿಸಿ ಯುವತಿಗೆ ಮಾನಸಿಕ, ಶಾರೀರಿಕ ಕಿರುಕುಳ ನೀಡಿದ ಆರೋಪದಂತೆ ಪತಿ ಸಹಿತ ಮೂರು ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ.

ಬಂಗ್ರಮಂಜೇಶ್ವರ ಕಾಡಿಯಾರ್ ನಿವಾಸಿ, ಆಯಿಶತ್ ಹನೀಶ್ (೨೬) ನೀಡಿದ ದೂರಿನಂತೆ ಪತಿ ಕೊಯಿಪ್ಪಾಡಿ ಕಡಪ್ಪುರದ ನೌಶಾದ್, ಈತನ ತಾಯಿ ಅಸ್ಮ, ಸಹೋದರಿ ಮುಂತಾಸ್ ಎಂಬಿವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಆಯಿಶತ್ ಹನೀಶ್ ಹಾಗೂ ನೌಶಾದ್‌ರ ಮದುವೆ ೨೦೨೦ ಆಗಸ್ಟ್‌ನಲ್ಲಿ ನಡೆದಿತ್ತು. ಈ ವೇಳೆ ೨ ಲಕ್ಷ ರೂಪಾಯಿ ನಗದು ಹಾಗೂ ೨೦ ಪವನ್ ಚಿನ್ನಾಭರಣ ನೀಡಲಾಗಿತ್ತೆನ್ನಲಾಗಿದೆ. ಆದರೆ ಇದೀಗ ಹೆಚ್ಚುವರಿಯಾಗಿ ನಗ-ನಗದು ತರಬೇಕೆಂದು ಒತ್ತಾಯಿಸಿ ಕಿರುಕುಳ ನೀಡುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page