ನಿವೃತ್ತ ಡಿಎಂಒ ಎ.ಪಿ. ದಿನೇಶ್ ಕುಮಾರ್ ನಿಧನ

ಕಾಸರಗೋಡು: ಜಿಲ್ಲೆಯ ನಿವೃತ್ತ ಡಿಎಂಒ, ಆರೋಗ್ಯ ಇಲಾಖೆಯ ಅಡಿಶನಲ್ ಡೈರೆಕ್ಟರ್ ಆಗಿದ್ದ ಅನ್ನೂರು ನಿವಾಸಿ ಡಾ. ಎ.ಪಿ. ದಿನೇಶ್ ಕುಮಾರ್ (60) ನಿಧನ ಹೊಂದಿದರು. ಕಣ್ಣೂರು, ವಯನಾಡ್ ಜಿಲ್ಲೆಗಳಲ್ಲಿ ಡಿಎಂಒ ಆಗಿಯೂ, ಪಯ್ಯನ್ನೂರು, ಮಾನಂತವಾಡಿ ತಾಲೂಕು ಆಸ್ಪತ್ರೆಗಳಲ್ಲಿ ಸುಪರಿಂಟೆಂಡೆಂಟ್ ಆಗಿಯೂ, ಪಳೆಯಂಙಾಡಿ ಸಿಎಚ್‌ಸಿಯಲ್ಲಿಯೂ ಸೇವೆ ಸಲ್ಲಿಸಿದ್ದರು.  ಮೃತರು ಪತ್ನಿ ವಿ.ಎಂ. ಅನಿತ, ಮಕ್ಕಳಾದ ಅನುಶ್ರೀ, ಆನಂದ್ ಶ್ರೀದೇವ್, ಅಳಿಯ ಸೂರಜ್, ಸೊಸೆ ಪೂಜ,  ಸಹೋದರಿಯರಾದ ಜಯಶ್ರೀ, ರಾಜಶ್ರೀ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page