ಪೈವಳಿಕೆ: ಜೋಡುಕಲ್ಲು ತಪೋವನ ಶ್ರೀ ಗಣೇಶ ಮಂದಿರ ಸಂರಕ್ಷೆಣೆಗಾಗಿ ಕಳೆದ 30 ದಿನಗಳಿಂದ ಭಜನೆ, ನಾಮ ಜಪ, ಯಾಗ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮುಂದುವರಿಯು ತ್ತಿದ್ದು, ನೂರಾರು ಮಂದಿ ಕಾರ್ಯ ಕರ್ತರು ಹೋರಾಟದಲ್ಲಿ ತೊಡಗಿಸಿ ಕೊಂಡಿದ್ದಾರೆ. ಈ ಸ್ಥಳಕ್ಕೆ ಬಿಜೆಪಿ ನೇತಾರ ಕೆ. ಸುರೇಂದ್ರನ್ ಹಾಗೂ ದಕ್ಷಿಣ ಕನ್ನಡದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಹಿತ ಹಲವು ಮಂದಿ ಬಿಜೆಪಿ ನೇತಾರರು ಭೇಟಿ ನೀಡಿದರು. ಈ ವೇಳೆ ಜೋಡುಕಲ್ಲು ತಪೋವನ ಗಣೇಶ ಮಂದಿರ ಸಂರಕ್ಷಣಾ ಕ್ರಿಯಾ ಸಮಿತಿ ಪದಾಧಿಕಾರಿಗಳು, ಮಾತೆಯರು, ಕಾರ್ಯಕರ್ತರು ಉಪಸ್ಥಿತರಿದ್ದರು.






