ಮಂಜೇಶ್ವರ: ತೋಟದ ಕೆಲಸಕ್ಕೆಂದು ತಿಳಿಸಿ ಏಳರ ಹರೆಯದ ಪುತ್ರಿಯ ಸಹಿತ ವಾಸಸ್ಥಳದಿಂದ ತೆರಳಿದ ಯುವತಿ ನಾಪತ್ತೆಯಾಗಿರು ವುದಾಗಿ ದೂರಲಾಗಿದೆ. ಕಡಂಬಾರ್ ಬಟ್ಯಪದವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಕರ್ನಾಟಕ ದಾವಣಗೆರೆಯ ಪರಶುರಾಂ ಎಂಬವರ ದ್ವಿತೀಯ ಪತ್ನಿ ಶೀಲ (26) ಹಾಗೂ 7ರ ಹರೆಯದ ಪುತ್ರಿ ನಾಪತ್ತೆಯಾಗಿದ್ದಾರೆನ್ನಲಾಗಿದೆ. ನವೆಂಬರ್ 11ರಂದು ಬೆಳಿಗ್ಗೆ ಶೀಲ ಮಗಳನ್ನು ಕರೆದುಕೊಂಡು ಕನ್ಯಾನದಲ್ಲಿ ತೋಟದ ಕೆಲಸಕ್ಕೆ ತೆರಳುವುದಾಗಿ ತಿಳಿಸಿ ಮನೆಯಿಂದ ತೆರಳಿದ್ದಾಳೆ. ಅನಂತರ ಮರಳಿ ಬಂದಿಲ್ಲ ಎಂದು ಪರಶುರಾಂ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಇದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.






