ಜಿಲ್ಲಾ ಶಾಲಾ ಕಲೋತ್ಸವ: ಪೆರಿಯ, ಪರಿಸರ ಪ್ರದೇಶಗಳಲ್ಲಿ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ತಪಾಸಣೆ

ಕಾಸರಗೋಡು: ಜಿಲ್ಲಾ ಶಾಲಾ ಕಲೋತ್ಸವದಂಗವಾಗಿ ಪೆರಿಯ ಪೇಟೆ, ಪರಿಸರ ಪ್ರದೇಶಗಳು, ಶಾಲಾ ಪರಿಸರವನ್ನು ಹಾಗೂ ವಿವಿಧ ಸಂಸ್ಥೆಗಳು, ವ್ಯಾಪಾರ ಮಳಿಗೆಗಳಲ್ಲಿ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ತಪಾಸಣೆ ನಡೆಸಿದೆ. ಕಲೋತ್ಸವಕ್ಕೆ ತಲುಪುವ ವಿದ್ಯಾರ್ಥಿಗಳು, ಅಧ್ಯಾಪಕರು, ಹೆತ್ತವರು, ಸಾರ್ವಜನಿಕರಿಗೆ ಶುಚಿತ್ವ ಹಾಗೂ ಆರೋಗ್ಯಕರವಾದ ವಾತಾವರಣ ಖಚಿತಪಡಿಸುವುದು, ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ವಿತರಣೆ, ಮಾರಾಟ, ಉಪಯೋಗ ಎಂಬಿವುಗಳನ್ನು ತಡೆಯುವುದು, ತ್ಯಾಜ್ಯವನ್ನು ನಿರ್ಲಕ್ಷ್ಯವಾಗಿ ಉಪೇಕ್ಷಿಸುವುದು, ಅವೈಜ್ಞಾನಿಕವಾಗಿ ಸಂಸ್ಕರಿಸುವುದನ್ನು ಹೊರತುಪಡಿಸುವುದು ಎಂಬೀ ಉದ್ದೇಶಗಳೊಂದಿಗೆ ತಪಾಸಣೆ ನಡೆಸಲಾಗಿದೆ.

ತಪಾಸಣೆಯಂಗವಾಗಿ ಅಂಗಡಿ ಮಾಲಕರಿಗೆ, ಸಂಸ್ಥೆಯನ್ನು ನಡೆಸುವವರಿಗೆ ಪ್ಲಾಸ್ಟಿಕ್ ಉತ್ಪನ್ನಗಳ ಬಗ್ಗೆ ಮಾಹಿತಿ, ನಿರ್ದೇಶ ನೀಡಲಾಯಿತು. ಸಂಸ್ಥೆಗಳು, ಪರಿಸರದಲ್ಲಿ ಪೂರ್ಣ ಶುಚಿತ್ವ ಖಚಿತಪಡಿಸಬೇಕು, ತ್ಯಾಜ್ಯಗಳನ್ನು ವಿಂಗಡಿಸಿಡಬೇಕು, ಸಾರ್ವಜನಿಕ ಸ್ಥಳಗಳಿಗೆ ಎಸೆಯಬಾರದು ಮೊದಲಾದ ವಿಚಾರಗಳಲ್ಲಿ ತಿಳುವಳಿಕೆ ಮೂಡಿಸಲಾಯಿತು.

You cannot copy contents of this page