ಕುಂಬಳೆ: ಶಾಸಕ ಎ.ಕೆ.ಎಂ. ಅಶ್ರಫ್‌ರ ಅಭಿವೃದ್ಧಿ ನಿಧಿಯಿಂದ 18 ಲಕ್ಷ ರೂ. ವೆಚ್ಚದಲ್ಲಿ ಬಂಬ್ರಾಣ ಜಿಎಲ್‌ಪಿ ಶಾಲೆಗೆ ಮಂಜೂರು ಮಾಡಿದ ಬಸ್‌ನ ಫ್ಲಾಗ್‌ಆಫ್ ಕಾರ್ಯವನ್ನು ಶಾಸಕರು ನಿರ್ವಹಿಸಿದರು. ಸ್ಥಳೀಯರ, ಹೆತ್ತವರ ವಿನಂತಿಯಂತೆ ಶಾಲೆಗೆ ಬಸ್ ಮಂಜೂರು ಮಾಡಲಾಗಿದೆ. ಕಾರ್ಯಕ್ರಮದಲ್ಲಿ ವಿ.ಪಿ. ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದರು. ಜನಪ್ರತಿನಿಧಿಗಳಾದ ಅಸೀಸ್ ಮರಿಕ್ಕ, ಅಸೀಸ್ ಕಳತ್ತೂರು, ಎ.ಕೆ. ಆರೀಫ್, ಎಂ.ಪಿ. ಖಾಲಿದ್, ಅಬ್ಬಾಸ್ ಕೊಡ್ಯಮ್ಮೆ, ಅಮಿತ ಉಜಾರು, ಸೂರ್ಯಪ್ರಕಾಶ್ ಇ.ಕೆ., ಸಿದ್ದಿಕ್, ಅಬ್ದುಲ್ಲ, ಮೊಹಮ್ಮದ್, ನಿಸಾರ್, ಎಂ.ಟಿ. ಮೊದೀನ್, ಜಂಸೀರ್, ಅರಬಿ, ಫಸಲ್, ಅಶ್ರಫ್, ಎಂ.ಟಿ. ಅಬ್ದುಲ್ಲ, ಮೂಸ ಕೆ.ಸಿ. ಮಾತನಾಡಿದರು.




