ಅಸೌಖ್ಯ ಪೀಡಿತ ವ್ಯಕ್ತಿಗೆ ಮಂಜೇಶ್ವರ ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆಯಿಂದ ಸಹಾಯ ಹಸ್ತ

ಮಂಜೇಶ್ವರ: ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯ 107ನೆ ಯೋಜನೆಯನ್ನು ಫಲಾನುಭವಿ ದಕ್ಷಿಣ ಕನ್ನಡ ಜಿಲ್ಲೆಯ ಕೋಟೆಕಾರ್ ನಿವಾಸಿ ಶಂಕರ್ ಆಳ್ವರಿಗೆ ಹಸ್ತಾಂತರಿಸಲÁ ಯಿತು. ಅನ್ನನಾಳಕ್ಕೆ ಕ್ಯಾನ್ಸರ್ ಬಾದಿsಸಿ ದೇರಳಕಟ್ಟೆ ಆಸ್ಪತ್ರೆಯಲ್ಲಿ ಹಲವು ಸಮಯಗ್ಣ್ಡಿಚಿಕಿತ್ಸೆಯಲ್ಲಿದ್ದು, ಲಕ್ಷಾಂ ತರ ರೂ. ಖರ್ಚು ಮಾಡಿದ್ದಾರೆ. ಈಗ ಪತ್ನಿಯೊಂದಿಗೆ ಮನೆಯಲ್ಲಿ ಸಂಕಷ್ಟ ಜೀವನ ನಡೆಸುತ್ತಿದ್ದಾರೆ. ಪತ್ನಿ ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದಾರೆ. ಇವರ ಕಷ್ಟದ ಸ್ಥಿತಿಯನ್ನು ಅರಿತ ಸಂಸ್ಥೆಯ ಸದಸ್ಯರು ಸಂಗ್ರಹಿಸಿದ ೨೫,೦೦೦ ರೂ.ವನ್ನು ನ್ಯಾಯವಾದಿ ನವೀನ್ ರಾಜ್ ಹಸ್ತಾಂತರ ಮಾಡಿದರು. ಈ ವೇಳೆ ಗಂಗಾಧರ ಬಾಕ್ರಬೈಲ್, ಕೃಷ್ಣ ಅಟ್ಟೆಗೋಳಿ, ಸುಕೇಶ್ ಬೆಜ್ಜ, ಅಂಕಿತ್ ಪಾವೂರು, ಪ್ರದೀಪ್ ಉಪಸ್ಥಿತರಿದ್ದರು.

RELATED NEWS

You cannot copy contents of this page