ಮಾದಕದ್ರವ್ಯ ಪ್ರಕರಣಪಿಟ್‌ಎನ್‌ಡಿಪಿಎಸ್ ಆಕ್ಟ್  ಪ್ರಕಾರ ಯುವಕ ಬಂಧನ

ಕಾಸರಗೋಡು: ಮಾದಕದ್ರವ್ಯ ಸಾಗಾಟದ ಹಲವು  ಪ್ರಕರಣಗಳ ಆರೋಪಿಯನ್ನು ಪಿಟ್ ಎನ್‌ಡಿ ಪಿಎಸ್ ಆಕ್ಟ್ ಪ್ರಕಾರ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಚೆಂಗಳ ಮಾರ್ತೋ ಮಾ ರಸ್ತೆ ಬಳಿಯ ನಿವಾಸಿಯೂ ಈಗ ಕಾಸರಗೋಡು ಅಣಂಗೂರು ಬದರ್ ಮಸೀದಿ ಬಳಿಯ ಕೊಲ್ಲಂಪಾಡಿ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿರುವ ಅಹಮ್ಮದ್ ಶರೀಫ್ ಪಿ.ಎ (35) ಬಂಧಿತ ವ್ಯಕ್ತಿ.  ಮಾದಕದ್ರವ್ಯ ಪತ್ತೆಗಾಗಿ ಪೊಲೀಸರು ಆರಂಭಿಸಲಾಗಿರುವ ಆಪರೇಶನ್ ತೂಫಾನ್ ಕಾರ್ಯಾಚರಣೆ ವೇಳೆ ಈತನನ್ನು ಹಲವು ಬಾರಿ ಮಾದಕದ್ರವ್ಯದ ಸಹಿತ ಪೊಲೀಸರು ಈ ಹಿಂದೆ ಬಂಧಿಸಿದ್ದರು. 2022 ಅಗೋಸ್ತ್ 15ರಂದು ಬೇಕಲ ಪೊಲೀಸರು ದಾಖಲಿಸಿಕೊಂಡಿದ್ದ 5.9 ಗ್ರಾಂ ಗಾಂಜಾ ಮತ್ತು 0.98. ಗ್ರಾಂ ಮೆಥಾಫಿಟಾಮಿನ್ ವಶ ಪ್ರಕರಣ, 2023 ಫೆಬ್ರವರಿ 1೦ರಂದು ಬೇಕಲ ಪೊಲೀಸರು 30.51 ಗ್ರಾಂ ಮೆಥಾಫಿಟಾಮಿನ್ ಪತ್ತೆಹಚ್ಚಿದ ಪ್ರಕರಣ, 2023 ಸೆಪ್ಟಂಬರ್ 12ರಂದು ವಿದ್ಯಾನಗರ ಪೊಲೀಸರು 3.99 ಗ್ರಾಂ ಮೆಥಾಫಿಟಾಮಿನ್ ಪತ್ತೆಹಚ್ಚಿದ ಪ್ರಕರಣ, 2025೫ ಫೆಬ್ರವರಿ 25ರಂದು ದಾಖಲಿಸಿಕೊಂ ಡಿದ್ದ ಎಂಡಿಎಂಎ ಸೇವನೆ ಪ್ರಕರಣ ಹಾಗೂ 2026 ಮೇ 7ರಂದು ಕಾಸರಗೋಡು ಪೊಲೀಸರು 3.68 ಗ್ರಾಂ ಎಂಡಿಎಂಎ ಪತ್ತೆಹಚ್ಚಿದ ಪ್ರಕರಣಗಳಲ್ಲೂ ಅಹಮ್ಮದ್ ಶರೀಫ್ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದರೆ. ಮಾದಕದ್ರವ್ಯ ಪ್ರಕರಣಗಳಲ್ಲಿ  ನಿರಂತರವಾಗಿ ಬಂಧಿಸಲ್ಪಡುವ ಆರೋಪಿಗಳನ್ನು ಈ ರೀತಿ ಪಿಟ್ ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಬಂಧಿಸಲಾಗುತ್ತಿದೆಯೆಂದೂ ಪೊಲೀಸರು ತಿಳಿಸಿದ್ದಾರೆ.

You cannot copy contents of this page