ಕಾಸರಗೋಡು: ಪೆರಿಯ ಮೀಂಙೋತ್ತ್ ಪೆರು ತ್ರಿಕೋವಿಲಪ್ಪನ್ ಶಿವಕ್ಷೇತ್ರದಿಂದ ಕಳವುಗೈದ ಹುಂಡಿ ಪುಲ್ಲೂರು ಉದಯನಗರದ ರಸ್ತೆ ಬದಿಯ ಪೊದೆಯಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರಲ್ಲಿದ್ದ್ದ ಹಣವನ್ನು ಕಳ್ಳರು ದೋಚಿದ್ದಾರೆ. ಈ ಕ್ಷೇತ್ರದಿಂದ ತಾಮ್ರ ಹಾಗೂ ಇತರ ಮೂರು ಕಾಣಿಕೆ ಹುಂಡಿಗಳನ್ನು ಕಳ್ಳರು ನಿನ್ನೆ ಮುಂಜಾನೆ ಕದ್ದು ಸಾಗಿಸಿದ್ದರು. ಕ್ಷೇತ್ರದ ಅರ್ಚಕರ ನಿನ್ನೆ ಮುಂಜಾನೆ ಬಾಗಿಲು ತೆರೆಯಲು ಬಂದಾಗ ಕಳವು ನಡೆದ ವಿಷಯ ಗಮನಕ್ಕೆ ಬಂದಿತ್ತು. ಕ್ಷೇತ್ರದ ಕಚರಿಯ ಬಾಗಿಲು ಒಡೆಯಲು ಕಳ್ಳರು ಯತ್ನಿಸಿದ್ದಾರೆ. ಕ್ಷೇತ್ರದ ಉಪ ದೇವತೆಯಾದ ಭಗವತಿ ಗುಡಿಯ ಬಾಗಿಲ ಬೀಗ ಒಡೆದು ಅದರೊಳ ಗಿದ್ದ ಕಾಣಿಕೆ ಹುಂಡಿಗಳನ್ನು ಕಳ್ಳರು ದೋಚಿದ್ದರು. ಆ ಬಗ್ಗೆ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಎಂ. ಬಾಲಕೃಷ್ಣನ್ ನಾಯರ್ ನೀಡಿದ ದೂರಿನಂತೆ ಮೇಲ್ಪರಂಬ ಪೊಲೀ ಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ಕಾಣಿಕೆ ಹುಂಡಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಅದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿ ದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದೆ.





