ರೈಲುಗಳ ಎ.ಸಿ. ಬೋಗಿಗಳಿಂದ ಹೊದಿಕೆಗಳನ್ನು ಕದಿಯುತ್ತಿದ್ದ ವ್ಯಕ್ತಿ ಕೈಯ್ಯಾರೆ ಸೆರೆ

ಕಾಸರಗೋಡು: ರೈಲುಗಳ ಹವಾನಿ ಯಂತ್ರಿತ ಕೊಠಡಿ ಬೋಗಿಗಳಿಂದ ಹೊದಿಕೆ ಮತ್ತು ದಿಂಬುಗಳನ್ನು ಕದಿಯುತ್ತಿದ್ದ ವ್ಯಕ್ತಿಯನ್ನು ರೈಲಿನ ಸಿಬ್ಬಂದಿಗಳೇ ಕಯ್ಯಾರೆ  ಸೆರೆ ಹಿಡಿದ ಘಟನೆ ನಡೆದಿದೆ. ಬಂಧಿತನ  ಹೆಸರು, ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ತಿರುವನಂತಪುರ- ಮಂಗಳೂರು ಮಲ ಬಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿ  ಹೊದಿ ಕೆಗಳನ್ನು ಕದ್ದು ಸಾಗಿಸುತ್ತಿದ್ದ ವೇಳೆ ಆತನನ್ನು ಕೈಯ್ಯಾರೆ ಸೆರೆ ಹಿಡಿಯ ಲಾಗಿದೆ. ಆತನ ಬ್ಯಾಗ್‌ನಿಂದ ನಾಲ್ಕು ಹೊದಿಕೆಗಳು ಮತ್ತು ಎರಡು ದಿಂಬು ಗಳನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ.

ರೈಲುಗಳ ಹವಾನಿಯಂತ್ರಿತ ಬೋಗಿಗಳಿಂದ ಹೊದಿಕೆ ಮತ್ತು ದಿಂಬುಗಳು ಕಳವು ಹೋಗುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗತೊಡಗಿದೆ. ಮೊದಲ ಬಾರಿ ಎಕ್ಸ್‌ಪ್ರೆಸ್ ಸೇರಿದಂತೆ ಮಂಗಳೂರು ಡಿಪೋದಿಂದ ಸೇವೆ ನಡೆಸುತ್ತಿರುವ ಐದು ರೈಲುಗಳಿಂದಾಗಿ ಕಳೆದ ಒಂದು ತಿಂಗಳಿಂದ ೬೦ ಹೊದಿಕೆಗಳು (ಬ್ಲಾಂಕೇಟ್) ಮತ್ತು  ೩೦ಕ್ಕೂ ಹೆಚ್ಚು ದಿಂಬುಗಳು ನಾಪತ್ತೆಯಾಗಿದ್ದವು.

RELATED NEWS

You cannot copy contents of this page