ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ: ಇಂದು ವಿವಿಧ ದೈವಗಳ ನರ್ತನ
ಸೀತಾಂಗೋಳಿ: ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗುತ್ತಿದೆ. ಶ್ರೀ ಕ್ಷೇತ್ರದಲ್ಲಿ ನಿನ್ನೆ ಪುಲ್ಲೂರ್ ಕಣ್ಣನ್ ದೈವ, ಕಣ್ಣಾಂಗಾಟ್ ಭಗವತಿ ದೈವ, ಪುಲ್ಲೂರ್ ಕಾಳಿ ದೈವ, ಶ್ರೀ ವಿಷ್ಣುಮೂರ್ತಿ ದೈವಗಳ ನರ್ತನ, ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, ಪುಲ್ಲೂರ್ಕಣ್ಣನ್ ದೈವದ ವೆಳ್ಳಾಟ, ಮೂವಾಳಂಕುಯಿ ಚಾಮುಂಡಿ ದೈವದ ನರ್ತನ, ತಂಬುರಾಟಿಯ ಸಂಧ್ಯಾ ಸ್ತೋತ್ರ, ಕಣ್ಣಂಗಾಟ್ ಭಗವತಿ ಮತ್ತು ಪುಲ್ಲೂರ್ ಕಾಳಿ ದೈವಗಳ ಸ್ತೋತ್ರ ನಡೆಯಿತು. ಇಂದು ಬೆಳಿಗ್ಗೆ ಪುಲ್ಲೂರ್ ಕಣ್ಣನ್ ದೈವದ ನರ್ತನ, ಕಣ್ಣಂಗಾಟ್ ಭಗವತಿ ದೈವದ ನರ್ತನ, ಪಡಿಞಾರ್ ಚಾಮುಂಡಿ ದೈವದ ನರ್ತನ, ಅಡಿಚ್ಚುತ್ತಳಿ ಸ್ತೋತ್ರ ನಡೆಯಿತು.
ಮಧ್ಯಾಹ್ನ ೧೨ರಿಂದ ತಚ್ಚಿಲೋನ್ ದೈವದ ವೆಳ್ಳಾಟ, ೧೨.೩೦ರಿಂದ ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, ೨.೩೦ರಿಂದ ಪುಲ್ಲೂರ್ಕಾಳಿ ದೈವದ ಸ್ತೋತ್ರ, ಅಪರಾಹ್ನ ೩ರಿಂದ ನರಂಬಿಲ್ ಭಗವತಿ ದೈವದ ಸ್ತೋತ್ರ, ೪ರಿಂದ ತಚ್ಚಿಲೋನ್ ಮತ್ತು ನಾಯನಾರ್ ದೈವಗಳ ನರ್ತನ, ಸಂಜೆ ೬ರಿಂದ ತಂಬುರಾಟಿಯ ಸಂಧ್ಯಾ ಸ್ತೋತ್ರ, ರಾತ್ರಿ ೭.೩೦ರಿಂದ ಗಣಪತಿ ಸ್ತೋತ್ರ, ೮.೩೦ ರಿಂದ ಕೊಡಿಎಲೆ ಸ್ತೋತ್ರ, ೧೧ರಿಂದ ದರ್ಶನದೊಂದಿಗೆ ಮೇಲೇರಿಗೆ ಕೊಳ್ಳಿ ತರುವುದು, ಅಗ್ನಿಸ್ಪರ್ಶ ಮೊದಲಾದ ಕಾರ್ಯಕ್ರಮ ನಡೆಯಲಿದೆ.
ನಾಳೆ ಪ್ರಾತಃಕಾಲ ೪ರಿಂದ ನರಂಬಿಲ್ ಭಗವತಿ ದೈವದ ನರ್ತನ, ಬೆಳಿಗ್ಗೆ ೯ರಿಂದ ಪುಲ್ಲೂರ್ ಕಾಳಿ ದೈವದ ನರ್ತನ, ತೀಪಾತಿ ದೈವದ ನರ್ತನ, ಅಗ್ನಿ ಸೇವೆ, ಶ್ರೀ ಮುಚ್ಚಿಲೋಟ್ ಭಗವತಿ ಅಮ್ಮನವರ ಸಿರಿಮುಡಿ ಪ್ರದರ್ಶನ, ಶ್ರೀ ಪುಲ್ಲೂರ್ ಕಾಳಿ ದೈವದ ಭೇಟಿ ಬಳಿಕ ಪ್ರಸಾದ ವಿತರಣೆ ನಡೆಯಲಿದೆ.