ಎನ್‌ಡಿಎ ಮಂಜೇಶ್ವರ ಮಂಡಲ ಚುನಾವಣಾ ಕಚೇರಿ ಉದ್ಘಾಟನೆ

ಮಂಜೇಶ್ವರ: ದೇಶದಲ್ಲಿ ಉಂಟಾಗಿರುವ ಅಭಿವೃದ್ಧಿ ನಮ್ಮಲ್ಲಿಯೂ ಆಗಬೇಕಾದರೆ ಬಿಜೆಪಿ ಗೆಲುವು ಅನಿವಾರ್ಯವೆಂದು ಕೇರಳದಲ್ಲೂ ಬಿಜೆಪಿಯ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ನುಡಿದರು. ಎನ್‌ಡಿಎ ಮಂಜೇಶ್ವರ ಮಂಡಲ ಚುನಾವಣಾ ಕಚೇರಿಯನ್ನು ಉಪ್ಪಳ ಭಗವತೀ ಗೇಟ್ ಸಮೀಪದ ಡಿಎಸ್‌ಸಿ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಈ ವೇಳೆ ಕಾಸರಗೋಡು ಲೋಕಸಭಾ ಎನ್‌ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್, ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ರವೀಂದ್ರನ್, ರಾಜ್ಯ ಸಮಿತಿ ಸದಸ್ಯ ವಿ. ಬಾಲಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ ಪೂಕಟ್ಟೆ, ಸುಧಾಮ ಗೋಸಾಡ, ಸತೀಶ್ಚಂದ್ರ ಭಂಡಾರಿ, ವಿಜಯಕುಮಾರ್ ರೈ, ಸುನಿಲ್ ಅನಂತಪುರ, ಆದರ್ಶ್ ಮಂಜೇಶ್ವರ, ವಸಂತ್ ಕುಮಾರ್ ಮಯ್ಯ, ಮಣಿಕಂಠ ರೈ, ಭರತ್ ರೈ, ಅನಿಲ್ ಮಣಿಯಂ ಪಾರೆ,  ಎ.ಕೆ. ಕಯ್ಯಾರ್, ಬಾಬು ಕುಬ ಣೂರು ಸಹಿತ ಹಲವರು ಭಾಗವಹಿಸಿದರು.

You cannot copy contents of this page