ಮೊದಲು ಪ್ರಯಾಣಿಕರ ತಂಗುದಾಣ ನಿರ್ಮಿಸಿ, ಆಮೇಲೆ ಮತಯಾಚಿಸಿ ಬನ್ನಿ

ಕುಂಬಳೆ: ಇಲ್ಲಿನ ಭಾಸ್ಕರ ನಗರದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳದಿರುವು ದನ್ನು ಪ್ರತಿಭಟಿಸಿ ನಾಗರಿಕರು ರಂಗಕ್ಕಿಳಿದಿದ್ದಾರೆ. ಪ್ರತಿಭಟನೆಯ ಅಂಗವಾಗಿ ನಾಗರಿಕರು ಭಾಸ್ಕರನಗರದಲ್ಲಿ ಫ್ಲೆಕ್ಸ್ ಬೋರ್ಡ್ ಸ್ಥಾಪಿಸಿದ್ದು, ಅದರಲ್ಲಿ ರಾಜಕೀಯ ಪಕ್ಷಗಳಿಗೆ ಬಹಿಷ್ಕಾರ ಹಾಕಲಾಗಿದೆ.

ಮತ ಯಾಚಿಸಿ ಯಾವುದೇ ರಾಜಕೀಯ ಪಕ್ಷಗಳು ಭಾಸ್ಕರ ನಗರ ಕ್ಕೆ ಬರುವುದಾದಲ್ಲಿ ಅದರ ಮೊದಲು ಪ್ರಯಾಣಿಕರ ಬಸ್ ತಂಗುದಾಣ ನಿರ್ಮಿಸಬೇಕು ಎಂದು ತಿಳಿಸಲಾಗಿದೆ.

ಕುಂಬಳೆ ಪೇಟೆಯಿಂದ ಬದಿ ಯಡ್ಕ ರಸ್ತೆಯಲ್ಲಿ ಕೇವಲ ೨ ಕಿಲೋ ಮೀಟರ್ ದೂರದಲ್ಲಿ ಭಾಸ್ಕರನಗರ ವಿದೆ. ಈ ಹಿಂದೆ ಇಲ್ಲೊಂದು ಬಸ್ ಪ್ರಯಾಣಿಕರ ತಂಗುದಾಣವಿತ್ತು.

ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯ ಅಭಿವೃದ್ಧಿ ಅಂಗವಾಗಿ ಈ ತಂಗುದಾಣವನ್ನು ಆಂಶಿಕವಾಗಿ ಮುರಿಯಲಾಗಿದೆ. ಆದ್ದರಿಂದ ಅದನ್ನು ಪ್ರಯಾಣಿಕರಿಗೆ  ಆಶ್ರಯಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇಲ್ಲಿ ನೂತನ ತಂಗುದಾಣ ನಿರ್ಮಿಸಬೇಕೆಂಬ ಬೇಡಿಕೆಯನ್ನು ನಾಗರಿಕರು ಹಲವು ತಿಂಗಳುಗಳಿಂದ ಮುಂದಿಡುತ್ತಿದ್ದಾರೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳ ಭಾಗದಿಂದ ಈ ಬಗ್ಗೆ ಯಾವುದೇ ಕ್ರಮ ಉಂಟಾಗಿಲ್ಲವೆಂದು ದೂರಲಾಗಿದೆ.

ಕುಂಬಳೆ-ಮುಳ್ಳೇರಿಯ ರಸ್ತೆ ಅಭಿ ವೃದ್ಧಿಯಾದ ಬಳಿಕ ವಿವಿಧೆಡೆಗಳಲ್ಲಾಗಿ ೬೫ ತಂಗುದಾಣಗ ಳನ್ನು ನಿರ್ಮಿಸ ಲಾಗಿದೆ.  ಆದರೆ ವಿದ್ಯಾರ್ಥಿಗಳು,ಕೂಲಿ ಕಾರ್ಮಿಕರು ಸಹಿತ ಪ್ರತಿದಿನ ೨೦೦ಕ್ಕೂ ಹೆಚ್ಚು ಮಂದಿ ಬಸ್ ಪ್ರಯಾಣಿಕರಿರುವ ಭಾಸ್ಕರನಗರದಲ್ಲಿ ತಂಗುದಾಣ ನಿರ್ಮಿಸದಿರುವುದು ಇಲ್ಲಿನ ಜನತೆ ಯೊಂದಿಗೆ ತೋರಿದ ಅವಗಣನೆಯಾ ಗಿದೆಯೆಂದು ಅಲ್ಲಿನ ನಾಗರಿಕರು ತಿಳಿಸುತ್ತಿದ್ದಾರೆ.  ರಸ್ತೆ ಅಭಿವೃದ್ಧಿಯಾದ ಬಳಿಕ ವಾಹನಗಳು ಅಪರಿಮಿತ ವೇಗದಲ್ಲಿ ಸಂಚರಿಸುತ್ತಿವೆ. ಬಿಸಿಲು, ಮಳೆಗೆ ರಸ್ತೆ ಬದಿಯಲ್ಲಿ ನಿಂತು ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ಇದರಿಂದ ಅಪಾಯಭೀತಿ ಎದುರಾಗಿದೆ ಎಂದೂ ದೂರಲಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ವಿವರಿಸಿ ಪಂಚಾಯತ್‌ಗೆ, ಶಾಸಕರಿಗೆ, ವಿವಿಧ ಪಕ್ಷಗಳ ಪ್ರತಿನಿಧಿಗಳಿಗೆ ದೂರು ನೀಡಲಾಗಿತ್ತು. ಆದರೆ ತಂಗುದಾಣ ನಿರ್ಮಾಣಕ್ಕೆ ಯಾರು ಆಸಕ್ತಿ ವಹಿಸಿಲ್ಲವೆಂದೂ ನಾಗರಿಕರು ಆರೋಪಿಸುತ್ತಿದ್ದಾರೆ.

You cannot copy contents of this page