ಎನ್.ಡಿ.ಎ ಸಮಾವೇಶ: ಪದ್ಮಜಾ ವೇಣುಗೋಪಾಲ್ ಕಾಸರಗೋಡಿಗೆ

ಕಾಸರಗೋಡು: ಬಿಜೆಪಿ ನೇತೃತ್ವದ ಎನ್‌ಡಿಎ ಕಾಸರಗೋಡು ಲೋಕಸಭಾ ಕ್ಷೇತ್ರದ ಸಮಾವೇಶ ಇಂದು ಅಪರಾಹ್ನ 3 ಗಂಟೆಗೆ ನಗರದ ಪಿಲಿಕುಂಜೆ ಯಲ್ಲಿರುವ ಕಾಸರಗೋಡು ಮುನಿಸಿಪಲ್ ಟೌನ್ ಹಾಲ್‌ನಲ್ಲಿ ನಡೆಯಲಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಪದ್ಮಜಾ ವೇಣುಗೋಪಾಲ್ ಸಮಾವೇಶವನ್ನು ಉದ್ಘಾಟಿಸುವರು. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಸಿ.ಕೆ. ಪದ್ಮನಾಭನ್ ಪ್ರಧಾನ ಭಾಷಣಗಾರರಾಗಿ ಭಾಗವ ಹಿಸಿ ಮಾತನಾಡುವರು. ಎನ್‌ಡಿಎಯ ಇತರ ಘಟಕ ಪಕ್ಷಗಳ ನೇತಾರರೂ ಭಾಗವಹಿಸಿ ಮಾತನಾಡುವರು.

ಬಿಜೆಪಿಗೆ ಸೇರಿದ ಬಳಿಕ ಇದೇ ಮೊದಲ ಬಾರಿಗೆ ಕಾಸರಗೋಡಿಗೆ ಆಗಮಿಸಲಿರುವ ಪದ್ಮಜಾ ವೇಣು ಗೋಪಾಲ್‌ರಿಗೆ ಬಿಜೆಪಿ ನೇತಾರರು ಹಾಗೂ ಕಾರ್ಯಕರ್ತರು ಭಾರೀ ಸ್ವಾಗತ ನೀಡಲಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬಿಜೆಪಿಗೆ ಸೇರ್ಪಡೆಗೊಂಡ ಪದ್ಮಜಾ ವೇಣುಗೋಪಾಲ್‌ರ ವಿರುದ್ಧ ಕಾಂಗ್ರೆಸ್ ನೇತಾರರೂ ಆಗಿರುವ ಸಹೋದರ ಕೆ. ಮುರಳೀಧರನ್ ತೀವ್ರ ವಾಗ್ದಾಳಿ ನಡೆಸಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಹಲವು ನೇತಾರರು ಪದ್ಮಜಾ ವಿರುದ್ಧ ಟೀಕಾಪ್ರಹಾರವನ್ನು  ನಡೆಸಿದ್ದರು. 

RELATED NEWS

You cannot copy contents of this page