ನಿವೃತ್ತ ಪೋಸ್ಟ್ ಮಾಸ್ತರ್ ನಿಧನ

ಪೈವಳಿಕೆ: ಸಿಪಿಐಯ ಹಿರಿಯ ಮುಖಂಡ, ನಿವೃತ್ತ ಪೋಸ್ಟ್ ಮಾಸ್ತರ್ ಚೇವಾರು ನೀರ್ಪಂತಿ ನಿವಾಸಿ ಅಚ್ಯುತ ರಾವ್ (೮೫) ಇಂದು ಬೆಳಿಗ್ಗೆ ನಿಧನಹೊಂದಿದರು. ಪೈವಳಿಕೆ ಪಂ.ನಲ್ಲಿ ಸಿಪಿಐಯನ್ನು ಕಟ್ಟಿ ಬೆಳೆಸಲು ಪ್ರಮುಖ ಪಾತ್ರ ವಹಿಸಿದ್ದರು. ಸುಬ್ಬಯ್ಯಕಟ್ಟೆ ತರಂಗಿಣಿ ಫ್ರೆಂಡ್ಸ್ ಕ್ಲಬ್ ಸ್ಥಾಪಿಸಿ ನಿರಂತರ ಕಾರ್ಯಕ್ರಮ ನಡೆಸಲು ಯತ್ನಿಸಿ ದ್ದರು. ಪತ್ನಿ ರಾಜೀವಿ ಈ ಹಿಂದೆ ನಿಧನಹೊಂದಿದ್ದಾರೆ. ಮೃತರು ಮಕ್ಕಳಾದ ಪ್ರಕಾಶ್ಚಂದ್ರ ರಾವ್, ಶಶಿಧರ ರಾವ್, ಅನಿತ, ಸುಜಾತ, ಅಳಿಯಂದಿರಾದ ರಾಘವೇಂದ್ರ, ಜಯಪ್ರಕಾಶ, ಸೊಸೆಯಂದಿರಾದ ಶರ್ಮಿಳ, ಶಾಂತ, ಅನಿತ, ಛಾಯ, ಸಹೋದರ ಚಂದ್ರಶೇಖರ ರಾವ್ ಸಹೋದರಿಯರಾದ ಗಿರಿಜಾ, ಶಾರದೆ, ವಿಜಯಲಕ್ಷ್ಮಿ, ಶಾಂಭವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇಬ್ಬರು ಮಕ್ಕಳಾದ ರವಿ ಕುಮಾರ್, ರಾಜ ಕುಮಾರ್ ಈ ಹಿಂದೆ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page