ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಮತ ಯಾಚಿಸಿದ ಉಣ್ಣಿತ್ತಾನ್

ಕಾಸರಗೋಡು: ಇದೇ ಮೊದಲ ಬಾರಿಗೆ ಮತ ಚಲಾಯಿಸುವವರನ್ನು ಮುಖತಃ ಭೇಟಿಯಾಗಿ ಅವರಿಂದ ಮತಯಾಚಿಸುವ ಕಾರ್ಯದಲ್ಲಿ ಯುಡಿಎಫ್ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್ ಸಕ್ರಿಯರಾಗಿದ್ದಾರೆ. ಇದರ ಅಂಗವಾಗಿ  ಅವರು ನಿನ್ನೆ ಉದುಮ ಮಂಡಲದ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿದರು.

ಚಟ್ಟಂಚಾಲ್ ಎಂಐಸಿ ಕಾಲೆಜು,  ಸಅದಿಯ ಕಾಲೇಜು ಕೋಳಿಯಡ್ಕ, ಆಲಿಯಾ ಕಾಲೇಜು ಪರವನಡ್ಕ, ಎಲ್‌ಬಿಎಸ್ ಕಾಲೇಜು ಪೊವ್ವಲ್ ಸಹಿತ  ವಿವಿಧೆಡೆಗಳಿಗೆ ಭೇಟಿ ನೀಡಿ ಆಯಾ ವಿದ್ಯಾರ್ಥಿಗ ಳಿಂದ ಮತ ಯಾಚಿಸಿದರು. ನೇತಾರರಾದ ಕಲ್ಲಟ್ರ ಅಬ್ದುಲ್ ಖಾದರ್, ಸಿ. ರಾಜನ್ ಪೆರಿಯಾ, ಬಿ.ಪಿ. ಪ್ರದೀಪ್ ಕುಮಾರ್, ಕಾರ್ತಿಕೇಯನ್ ಪೆರಿಯ ಮೊದಲಾದವರು ಜತೆಗಿದ್ದರು.

RELATED NEWS

You cannot copy contents of this page