ಪಚ್ಚಂಬಳದಲ್ಲಿ ಕೆಂಪುಕಲ್ಲು ಕ್ವಾರೆಯಿಂದ ಸಮಸ್ಯೆ- ದೂರು
ಕುಂಬಳೆ: ಪಚ್ಚಂಬಳದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಕೆಂಪುಕಲ್ಲಿನ ಕ್ವಾರೆಯಿಂದ ಸ್ಥಳೀಯರಿಗೆ ಸಮಸ್ಯೆ ಸೃಷ್ಟಿಯಾಗಿದೆಯೆಂದು ದೂರಲಾಗಿದೆ.
ಮಸೀದಿ, ದರ್ಗಾ, ಹತ್ತರಷ್ಟು ಮನೆಗಳಿರುವ ಪ್ರದೇಶದಲ್ಲಿ ಸುಮಾರು ೫೦ ಸೆಂಟ್ ಸ್ಥಳದಲ್ಲಿ ಕ್ವಾರೆ ಕಾರ್ಯಾಚರಿಸುತ್ತಿದೆ ಎನ್ನಲಾಗಿದೆ. ಕ್ವಾರೆಯಿಂದ ಕರ್ಕಶ ಶಬ್ದ ಹಾಗೂ ದೂಳಿನಿಂದಾಗಿ ಸಮಸ್ಯೆ ಎದುರಾಗಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ. ಈ ಕ್ವಾರೆಯಿಂದ ಉಂಟಾಗಿರುವ ಸಮಸ್ಯೆಯನ್ನು ವಿವರಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ನಾಮಪತ್ರವಾಗಿ ಅಧಿಕಾರಿಗಳು ಕ್ವಾರೆಗೆ ಭೇಟಿ ನೀಡಿ ಮರಳಿದ್ದಾರೆ. ಆದರೆ ಕ್ವಾರೆಯ ಕಾರ್ಯಾಚರಣೆಗೆ ತಡೆಯೊಡ್ಡಲು ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.