ಫೊಟೋಗ್ರಾಫರ್ಸ್ ಕುಂಬಳೆ ವಲಯ ಗುರುತು ಚೀಟಿ ವಿತರಣೆ ಉದ್ಘಾಟನೆ

ಮಂಜೇಶ್ವರ: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿ ಯೇಶನ್ ಕುಂಬಳೆ ವಲಯದ ಗುರುತು ಚೀಟಿ ವಿತರಣೆಯ ಉದ್ಘಾಟನೆ ಹಾಗೂ ಸಂಘಟನೆಯ ತರಬೇತಿ ನಿನ್ನೆ ಸಂಜೆ ಹೊಸಂಗಡಿಯ ಗೇಟ್‌ವೇ ಆಡಿಟೋರಿಯಂನಲ್ಲಿ ನಡೆಯಿತು. ವಲಯ ಅಧ್ಯಕ್ಷ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧ್ಯಕ್ಷ ಕೆ.ಸಿ ಅಬ್ರಾಹಂ ಗುರುತು ಚೀಟಿ ವಿತರಣೆಯ ಉದ್ಘಾಟನೆಯನ್ನು ನೆರವೇರಿಸಿ ಸಾಂತ್ವಾನ ಯೋಜನೆಯ ಮಹತ್ವನ್ನು ಹೇಳಿದರು. ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು ಸಂಘಟನೆಯ ತರಗತಿ ನಡೆಸಿಕೊಟ್ಟರು. ಜಿಲ್ಲಾ ಇನ್ಸೂರೆನ್ಸ್ ಕೋ ಆರ್ಡಿನೇಟರ್ ಅಶೋಕ್ ಪೊಯಿನಾಚಿ ಇನ್ಸೂರೆನ್ಸ್ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಕೋಶಾಧಿಕಾರಿ ಸುನಿಲ್ ಕುಮಾರ್. ಪಿ.ಟಿ, ಜಿಲ್ಲಾ ಉಪಾಧ್ಯಾಕ್ಷ ವೇಣು . ವಿ.ವಿ, ಜಿಲ್ಲಾ ಜತೆ ಕಾರ್ಯದರ್ಶಿ ರಾಜೇಂದ್ರನ್‌ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯ ವೇಣು ಗೋಪಾಲ್ ನೀರ್ಚಾಲ್ ಪ್ರಾರ್ಥನೆ ಹಾಡಿದರು. ಕುಂಬಳೆ ವಲಯ ಕಾರ್ಯದರ್ಶಿ ನಿತ್ಯಪ್ರಸಾದ್ ಸ್ವಾಗತಿಸಿ, ಉಪಾಧ್ಯಾಕ್ಷ ಅಪ್ಪಣ್ಣ ವಂದಿಸಿದರು. ಜಿಲ್ಲಾ, ವಲಯ, ಯೂನಿಟ್ ಪದಾಧಿ ಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸಭೆಯ ಬಳಿಕ ಇಫ್ತಾರ್ ಕೂಟ ಏರ್ಪಡಿಸಲಾಯಿತು.

RELATED NEWS

You cannot copy contents of this page