ಪ್ರಧಾನಮಂತ್ರಿಯ ಭದ್ರತೆಗೆ ರಸ್ತೆಬದಿ ಕಟ್ಟಲಾಗಿದ್ದ ಹಗ್ಗ ಕುತ್ತಿಗೆಗೆ ಸಿಲುಕಿ ಸ್ಕೂಟರ್ ಸವಾರ ಸಾವು

ಕೊಚ್ಚಿ: ಪ್ರಧಾನಮಂತ್ರಿ ನರೇಂದ್ರಮೋದಿಯವರ ಭದ್ರತೆಗಾಗಿ ರಸ್ತೆ ಬದಿ ಕಟ್ಟಲಾಗಿದ್ದ ಹಗ್ಗ ಕುತ್ತಿಗೆಗೆ ಸಿಲುಕಿ ಸ್ಕೂಟರ್ ಸವಾರನಾದ ಯುವಕ ದಾರುಣವಾಗಿ ಮೃತಪಟ್ಟ ಘಟನೆ ಕೊಚ್ಚಿಯಲ್ಲಿ ನಡೆದಿದೆ. ಕೊಚ್ಚಿ ವಡುತಲ ನಿವಾಸಿ ಮನೋಜ್ ಉಣ್ಣಿ (೨೮) ಸಾವನ್ನಪ್ಪಿದ ಯುವಕ. ಇವರು ನಿನ್ನೆ ರಾತ್ರಿ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ವೇಳೆ ರಸ್ತೆ ಬದಿ ಭದ್ರತೆಗಾಗಿ ಕಟ್ಟಲಾಗಿದ್ದ ಹಗ್ಗ ಅವರ ಕುತ್ತಿಗೆಗೆ ಸಿಲುಕಿ ಅವರು ಅಲ್ಲೇ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದೆ. ಅದನ್ನು ಕಂಡ ಪೊಲೀಸರು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕೊಚ್ಚಿ ಎಸ್.ಐ ರಸ್ತೆ ಮತ್ತು ಎಂ.ಜಿ ರಸ್ತೆ ಏರುದಾರಿಯಲ್ಲಿ ಕಟ್ಟಲಾಗಿದ್ದ ಹಗ್ಗ ನಿನ್ನೆ ರಾತ್ರಿ  10 ಗಂಟೆಗೆ  ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ಉಣ್ಣಿಯ ಕುತ್ತಿಗೆಗೆ ಸಿಲುಕಿಕೊಂಡು ಅದರ ಆಘಾತಕ್ಕೆ   ಬಿದ್ದ ಅವರ ತಲೆ ನೆಲಕ್ಕೆ ಬಡಿದು ಆಸ್ಪತ್ರೆಗೆ ಸಾಗಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾ ಯಿತಾದರೂ ಅದು ಫಲಕಾರಿಯಾಗಿದೆ ಇಂದು ಮುಂಜಾನೆ   ೧.೩೦ ಗಂಟೆ ವೇಳೆ ಅವರು ಸಾವನ್ನಪ್ಪಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page