ಬದಿಯಡ್ಕ ಪಂಚಾಯತ್ ಬಂಟರ ಸಂಘದ ಬಂಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ
ಬದಿಯಡ್ಕ: ಪಂಚಾಯತ್ ಬಂಟರ ಸಂಘ ಮತ್ತು ರೈ ಬ್ರದರ್ಸ್ ಬೇಳ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಎರಡು ದಿನಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಮೈದಾನದಲ್ಲಿ ಜರಗಿತು. ಸಮಾರೋಪ ಸಮಾರಂಭದಲ್ಲಿ ಬದಿಯಡ್ಕ ಬಂಟರ ಸಂಘದ ಅಧ್ಯಕ್ಷ ನಿರಂಜನ ರೈ ಪೆರಡಾಲ ಅಧ್ಯಕ್ಷತೆ ವಹಿಸಿದರು.
ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ರೈ ಪೆರಡಾಲಗುತ್ತು ಬಹುಮಾನ ವಿತರಿಸಿದರು. ೧೦ ತಂಡಗಳು ಭಾಗವಹಿಸಿದ್ದವು. ಬಂಟ್ಸ್ ದೇರಂಬಳ ಪ್ರಥಮ ಸ್ಥಾನ, ಶೆಟ್ಟಿ ಬ್ರದರ್ಸ್ ಕುಳೂರು ದ್ವಿತೀಯ ಸ್ಥಾನ ಪಡೆಯಿತು. ಬದಿಯಡ್ಕ ಪಂಚಾಯತ್ ಬಂಟರ ಸಂಘದ ಉಪಾಧ್ಯಕ್ಷ ಜಗನ್ನಾಥ ರೈ ಕೊರೆಕ್ಕಾನ, ಪ್ರಧಾನ ಕಾರ್ಯದರ್ಶಿ ಪ್ರದೀಪ ಕುಮಾರ್ ಶೆಟ್ಟಿ ಬೇಳ, ಉದ್ಯಮಿ ಪ್ರತೀಕ್ ಆಳ್ವ ಪೆರಡಾಲ ಶುಭ ಹಾರೈಸಿದರು. ಬಂಟ್ಸ್ ಪ್ರೀಮಿ ಯರ್ ಲೀಗ್ ಸಂಚಾಲಕ ಗುರು ರಾಜ್ ರೈ ಬೇಳ ಸ್ವಾಗತಿಸಿ, ವಂದಿಸಿದರು.