ಕಾಸರಗೋಡು: ನಗರದ ಎ.ಕೆ. ಬ್ರದರ್ಸ್ ವ್ಯಾಪಾರ ಸಂಸ್ಥೆಯ ಪಾಲುದಾರ ಅಡ್ಕತ್ತಬೈಲು ನಿವಾಸಿ ಎ.ಕೆ. ಸುಲ್ಫೀಕರ್ (51) ನಿಧನ ಹೊಂದಿದರು. ಇವರ ಪತ್ನಿಯ ತಾಯಿ ಆಯಿಷಾ ದೇಳಿ ನಿವಾಸಿ ಒಂದು ದಿವಸ ಮೊದಲು ನಿಧನ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇವರು ಪತ್ನಿ ಮನೆಗೆ ತಲುಪಿದ್ದರು. ನಿನ್ನೆ ಬೆಳಿಗ್ಗೆ ಎದೆನೋವು ಕಂಡುಬಂದ ಹಿನ್ನೆಲೆಯಲ್ಲಿ ದೇಳಿಯ ಆಸ್ಪತ್ರೆಗೆ ತಲುಪಿಸಲಾಗಿತ್ತು. ಆದರೆ ಗಂಭೀರ ಸ್ಥಿತಿಯಾದ ಕಾರಣ ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ದಿ| ಎ.ಕೆ. ಹಮೀದ್- ದಿ| ಮರಿಯಾಂಬಿ ದಂಪತಿ ಪುತ್ರನಾಗಿದ್ದಾರೆ.
ಮೃತರು ಪತ್ನಿ ರಹ್ಮತ್ ಬೀವಿ, ಮಕ್ಕಳಾದ ಅಮ್ಮಾನ್, ಅರ್ಮಾನ್, ಅಮೀನ್, ಸಹೋದರ-ಸಹೋದರಿಯಾದ ಶಂಸೀರ್‌ಬಾನು, ಶಹನಾಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






