ಆನೆಬಾಗಿಲು ವಲಿಯವೀಡು ತರವಾಡು ಶ್ರೀ ವಯನಾಟುಕುಲವನ್ ಆಡಳಿತ ಸಮಿತಿ ಮಹಾಸಭೆ

ಕಾಸರಗೋಡು: ಆನೆಬಾಗಿಲು ವಲಿಯವೀಡು ತರವಾಡು ಶ್ರೀ ವಯನಾಟುಕುಲವನ್ ಧರ್ಮದೈವ ಆಡಳಿತ ಸಮಿತಿ ಮಹಾಸಭೆ ಇತ್ತೀಚೆಗೆ ತರವಾಡು ಮನೆಯಲ್ಲಿ ಜರಗಿತು. ಸಮಿತಿ ಅಧ್ಯಕ್ಷ ಕುಮಾರನ್ ತಿರುವಕ್ಕೋಳಿ ಅಧ್ಯಕ್ಷತೆ ವಹಿಸಿದರು. ಕಾರ್ನವರ್ ದಾಸನ್ ಕಂಡತ್ತಿಲ್ ಉದ್ಘಾಟಿಸಿದರು. ಕಾರ್ಯದರ್ಶಿ ಸುಕುಮಾರ್ ಕುದ್ರೆಪ್ಪಾಡಿ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ವಿನಯನ್ ಕೇಳುಗುಡ್ಡೆ ಲೆಕ್ಕಪತ್ರ ಮಂಡಿಸಿದರು. ತರವಾಡಿನಲ್ಲಿ ಮುಂದೆ ನಡೆಯಲಿರುವ ಕ್ಷೇತ್ರ ನವೀಕರಣ ಪುನರ್‌ಪ್ರತಿಷ್ಠೆಯ ಬಗ್ಗೆ ಚರ್ಚೆ ನಡೆಸಲಾಯಿತು.

ಕೆಎಸ್‌ಇಬಿಯಲ್ಲಿ 36 ವರ್ಷ ಓವರ್‌ಸಿಯರ್ ಆಗಿದ್ದು ನಿವೃತ್ತರಾದ ತರವಾಡು ಆಡಳಿತ ಸಮಿತಿ ಉಪಾಧ್ಯಕ್ಷ ಅರವಿಂದಾಕ್ಷನ್ ಬಿ.ಎ, ಉದುಮ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾದ ಅಮ್ಮಿಣಿ ಟೀಚರ್‌ರನ್ನು ತರವಾಡು ವತಿಯಿಂದ ಸನ್ಮಾನಿಸಲಾ ಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಟುಂಬದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಉಪಾ ಧ್ಯಕ್ಷರಾದ ಅರವಿಂದಾಕ್ಷನ್ ಬಿ.ಎ, ಅರವಿಂದನ್ ರಾವಣೇಶ್ವರ, ಜೊತೆ ಕಾರ್ಯದರ್ಶಿಗಳಾದ ಜಯಪ್ರಕಾಶ್ ಬೇಳ, ರಾಜೇಶ್ ನೆಕ್ರಾಜೆ, ನವೀಕರಣೆ ಹಾಗೂ ಪುನರ್ ಪ್ರತಿಷ್ಠಾ ಸಮಿತಿ ಅಧ್ಯಕ್ಷರಾದ ಜಯಚಂದ್ರನ್ ಅಡ್ಕತ್‌ಬೈಲು, ಮಹಿಳಾ ಸಮಿತಿ ಅಧ್ಯಕ್ಷೆ ರಜನಿ ಪೆರಿಯ, ರಾಜೇಂದ್ರನ್ ಟಿ, ತರವಾಡಿನ ಬೆಳ್ಚಪ್ಪಾಡರು ಶುಭ ಕೋರಿದರು. ಸುಕುಮಾರ್ ಕುದ್ರೆಪ್ಪಾಡಿ ಸ್ವಾಗತಿಸಿ, ಉದಯನ್ ಉದಯಗಿರಿ ವಂದಿಸಿದರು.

You cannot copy contents of this page