ಯುವತಿಯನ್ನು ವಸತಿಗೃಹದಲ್ಲಿ ಕಟ್ಟಿಹಾಕಿ ಲೈಂಗಿಕ ಕಿರುಕುಳ ನೀಡಿದ ಆರೋಪಿ ಸೆರೆ

ಕಾಸರಗೋಡು: ವಸತಿಗೃಹ ದಲ್ಲಿ ಕಟ್ಟಿಹಾಕಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ಯನ್ನು ಕಾಸರಗೋಡು ಪೊಲೀ ಸರು ಬಂಧಿಸಿದ್ದಾರೆ. ಕಾಸರ ಗೋಡು ನೆಲ್ಕಳ ನಿವಾಸಿ ವಿಷ್ಣು ಪ್ರಸಾದ್ ಅಲಿಯಾಸ್ ವಿಷ್ಣು (26) ಬಂಧಿತ ಆರೋಪಿ. ಜೂನ್ 13ರಂದು ಕಾಸರಗೋಡು ನಗರಕ್ಕೆ ಬಂದಿದ್ದ 19ರ ಹರೆಯದ ಯುವತಿಯಲ್ಲಿ ಕುಟುಂಬ ವಿಷಯದ ಬಗ್ಗೆ ಮಾತನಾಡಲೆಂದು ತಿಳಿಸಿ ಆರೋಪಿ ಆಕೆಯನ್ನು ಆಟೋ ರಿಕ್ಷಾಕ್ಕೇರಿಸಿ ನಗರದ ವಸತಿಗೃಹಕ್ಕೆ ಸಾಗಿಸಿ ಅಲ್ಲಿನ ಕೊಠಡಿಯಲ್ಲಿ ಆಕೆಯ ಮೊಬೈಲ್ ಫೋನ್ ಪಡೆದ ಬಳಿಕ ಲೈಂಗಿಕ ಕಿರುಕುಳ ನೀಡಲೆತ್ನಿಸಿದ್ದನೆಂದೂ ಅದಕ್ಕೆ ಯುವತಿ ವಿರೋಧವ್ಯಕ್ತಪಡಿಸಿದಾಗ ಕಟ್ಟಿಹಾಕಿ ಆಕೆಗೆ ಲೈಂಗಿಕ ಕಿರುಕುಳ ನೀಡಿದನೆಂದು ಆಕೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಳು. ಅದರಂತೆ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ

ಆತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಪೊಲೀಸರು ಇಂದು ನ್ಯಾಯಾಲಯದಲ್ಲಿ ಹಾಜರು ಪಡಿಸಲಿದ್ದಾರೆ.

RELATED NEWS

You cannot copy contents of this page